ಕರಾವಳಿ

ವಂಡ್ಸೆ: ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ: ಮಾಲಕನ ಕಣ್ಣೆದುರೆ ಅಗ್ನಿಗೆ ಆಹುತಿಯಾದ ಕಾರು!

Pinterest LinkedIn Tumblr

ಕುಂದಾಪುರ: ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಿಸಿ ಸಂಪೂರ್ಣ ಕಾರು ಅಗ್ನಿಗೆ ಆಹುತಿಯಾದ ಘಟನೆ ಹೆಮ್ಮಾಡಿ-ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಸಮೀಪ ಜ.31 ರಂದು ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಘಟನೆ ವಿವರ: ಬೀಜಾಡಿ ನಿವಾಸಿಯಾದ ಭಾಸ್ಕರ್ ಆಚಾರ್ ಎನ್ನುವರಿಗೆ ಸೇರಿದ ಕಾರು ಇದಾಗಿದ್ದು ಬೆಳಿಗ್ಗೆ ಕಾರ್ಯನಿಮಿತ್ತ ಅವರು ಆಲೂರಿಗೆ ತೆರಳಿದ್ದು 10 ಗಂಟೆಯ ಸುಮಾರಿಗೆ ಅಲ್ಲಿಂದ ಮತ್ತೆ ರಾಜ್ಯಹೆದ್ದಾರಿಯ ಮೂಲಕ ಕುಂದಾಪುರ ಕಡೆಗೆ ಬರುತ್ತಿದ್ದರು. ಈ ವೇಳೆ ಕಾರಿ‌ನ ಮುಂಭಾಗದಲ್ಲಿ ಶಬ್ದ ಸಹಿತ ಸಣ್ಣದಾಗಿ ಹೊಗೆ ಕಾಣಿಸಿಕೊಂಡಿದ್ದು ಭಾಸ್ಕರ್ ಅವರು ಕಾರನ್ನು ರಸ್ತೆ ಸಮೀಪ ಪಾರ್ಕ್ ಮಾಡಿದ್ದು ಈ ವೇಳೆಗಾಗಾಲೇ ಬೆಂಕಿ ತೀವೃತೆ ಹೆಚ್ಚಿತ್ತು. ಸ್ಥಳೀಯರು ಆಗಮಿಸಿ ನಂದಿಸುವ ಪ್ರಯತ್ನ ಮಾಡಿದರೂ ಕೂಡ ಸ್ವಲ್ಪ ಹೊತ್ತಿನಲ್ಲಿ ಇಡೀ ಕಾರು ಸುಟ್ಟು ಕರಕಲಾಗಿದೆ. ಭಾಸ್ಕರ್ ಕಾರಿನಿಂದ ಇಳಿದಿದ್ದರಿಂದ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 2023ರಲ್ಲಿ ಖರೀದಿಸಿದ ಪೆಟ್ರೋಲ್ ಚಾಲಿತ ಕಾರು ಇದಾಗಿದೆ.

ಕುಂದಾಪುರ ಅಗ್ನಿಶಾಮಕ ದಳ, ಕೊಲ್ಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.