ಕುಂದಾಪುರ: ಪ್ರಸಿದ್ಧ ಕ್ಷೇತ್ರವಾದ ಕುಂದಾಪುರ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಪ್ಯಾನ್ ಇಂಡಿಯಾ ನಟ, ನಿರ್ದೇಶಕ, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ದಂಪತಿಗಳು ಭೇಟಿ ನೀಡಿ ಶ್ರೀ ವಿನಾಯಕನಿಗೆ ಪ್ರಿಯವಾದ 125 ತೆಂಗಿನಕಾಯಿ ಮೂಡು ಗಣಪತಿ ಸೇವೆಯನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಇದ್ದರು.

ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯರು ರಿಷಬ್ ಶೆಟ್ಟಿ ದಂಪತಿಗಳನ್ನು ಆದರಿಂದ ಬರಮಾಡಿಕೊಂಡು ಶ್ರೀ ದೇವಳದಿಂದ ಗೌರವ ಸಮರ್ಪಣೆಯನ್ನು ಮಾಡಿದರು. ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಸಹೋದರರು ದೇವರ ವಿಶೇಷ ಸಿರಿಮುಡಿಗಂಧ ಪ್ರಸಾದವನ್ನು ನೀಡಿ ಆಶೀರ್ವದಿಸಿದರು.
ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಧರ್ಮದರ್ಶಿಗಳಾದ ಕೆ.ಪದ್ಮನಾಭ ಉಪಾಧ್ಯಾಯರು, ಶ್ರೀದೇವಳದ ಆಡಳಿತ ಹಾಗೂ ಅರ್ಚಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments are closed.