ಕರಾವಳಿ

ಕೋಟೇಶ್ವರದ ‘ಕೊಡಿ ಹಬ್ಬ’: ಡಿ.4-5ರಂದು ರಥಬೀದಿ ರಸ್ತೆ,, ದೇವಸ್ಥಾನ ಆಸುಪಾಸು ರಸ್ತೆ ಬಂದ್- ಪಾರ್ಕಿಂಗ್ ಸ್ಥಳದಲ್ಲಿ ಬದಲಾವಣೆ!

Pinterest LinkedIn Tumblr

ಕುಂದಾಪುರ: ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ(ಕೋಡಿ ಹಬ್ಬ) ವಾರ್ಷಿಕ ಜಾತ್ರಾ ಮಹೋತ್ಸವ ಡಿ.4 ರಂದು ನಡೆಯಲಿದ್ದು ಡಿ.5ರಂದು ಕೂಡ ಮುಂದುವರೆಯಲಿದೆ.

ಈ ಕಾರ್ಯಕ್ರಮಕ್ಕೆ  ಸಹಸ್ರಾರು ಭಕ್ತಾದಿಗಳು ಭಾಗವಹಿಸಲಿದ್ದು ಈ ಸಮಯ ಕೋಟೇಶ್ವರದ ರಥ ಬೀದಿ ರಸ್ತೆಯನ್ನು ಹಾಗೂ ದೇವಸ್ಥಾನದ ಆಸು-ಪಾಸುವಿನ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡುವುದರಿಂದ ಈ ಸಮಯ ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಈ ಕೆಳಕಂಡ ಪಾರ್ಕಿಂಗ್ ಸ್ಥಳಗಳಲ್ಲಿ ತಮ್ಮ  ವಾಹನವನ್ನು ಪಾರ್ಕಿಂಗ್ ಮಾಡಬಹುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಕುಂಭಾಶಿ, ವಕ್ವಾಡಿ, ತೆಕ್ಕಟ್ಟೆ, ಉಡುಪಿ ಕಡೆಯಿಂದ ಜಾತ್ರೆಗೆ  ಬರುವವರಿಗೆ ನೀಡಲಾದ ಪಾರ್ಕಿಂಗ್ ಸ್ಥಳಗಳು:

1. ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರದ ಶಾಲಾ ಮೈದಾನದ ಮುಂಬಾಗದಲ್ಲಿರುವ ಖಾಲಿ ಸ್ಥಳ.

2. ಅರಸು ಬೆಟ್ಟು ಕ್ರಾಸ್ ರಸ್ತೆ ಬಳಿ  ಇರುವ ಖಾಲಿ ಸ್ಥಳ

3. ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಶಾಲಾ ಮೈದಾನದ ಹಿಂಭಾಗ ಅಂದರೆ ರಾ ಹೇ  66ರ ಪಕ್ಕದಲ್ಲಿ ಇರುವ ಖಾಲಿ ಸ್ಥಳ.

ಹಾಲಾಡಿ, ಕಾಳಾವರ ಕಡೆಯಿಂದ ಜಾತ್ರೆಗೆ ಬರುವವರಿಗೆ ನೀಡಲಾದ ಪಾರ್ಕಿಂಗ್ ಸ್ಥಳ:

1. ಕೋಟೇಶ್ವರ ವರದರಾಜ ಕಾಲೇಜಿನ ಬಳಿ ಇರುವ ಖಾಲಿ ಸ್ಥಳ.

2. ಕಾಗೇರಿಯ ಬ್ರಿಡ್ಜ್ ಬಳಿ ಇರುವ ಖಾಲಿ ಸ್ಥಳ

3. ಅಂಶು ಮೆಡಿಕಲ್ ಮುಂಭಾಗದ ಖಾಲಿ ಸ್ಥಳ

4. ಕೋಟೇಶ್ವರ ಪಿ ಎಚ್ ಸಿ ಬಳಿ ಇರುವ ಖಾಲಿ ಸ್ಥಳ.

ಕುಂದಾಪುರ-ಬೈಂದೂರು ಕಡೆಗಳಿಂದ ಬರುವವರಿಗೆ ನೀಡಲಾದ ಪಾರ್ಕಿಂಗ್ ಸ್ಥಳ:

1. ಸಹನಾ ಹೋಟೆಲ್ ಮುಂಬಾಗ ಇರುವ ಖಾಲಿ ಸ್ಥಳ.

2. ಆರ್ಯ ಹೋಟೆಲ್ ಬಳಿ ಇರುವ ಖಾಲಿ ಸ್ಥಳ.

2. ಐತಾಳ್ ಬೆಟ್ಟು ರಸ್ತೆ ಕ್ರಾಸ್ ನಲ್ಲಿರುವ ಖಾಲಿಸ್ಥಳ.

ಕೋಡಿ, ಹಳೆಅಳಿವೆ, ಕೊರವಡಿ ಹಾಗೂ ಇತರ ಕಡೆಗಳಿಂದ ಬರುವವರಿಗೆ ನೀಡಲಾದ ಪಾರ್ಕಿಂಗ್ ಸ್ಥಳ:

1. ಕೋಟಿಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸುರೇಶ್ ಬೆಟ್ಟಿನ್ ಮನೆಯವರ ಖಾಲಿ ಜಾಗ

2.  ಕಿನಾರ-ಕೋಡಿ ರಸ್ತೆಯಲ್ಲಿರುವ ಶಾಹಿ ನಗರದ ಬಳಿ ಇರುವ ಖಾಲಿ ಸ್ಥಳ.

ಈ ಮೇಲ್ಕಂಡ ಪಾರ್ಕಿಂಗ್ ಸ್ಥಳಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ,  ಶ್ರೀ ದೇವರ ದರ್ಶನವನ್ನು ಪಡೆದುಕೊಳ್ಳುವುದು. ಸಂಚಾರ ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕುಂದಾಪುರ ಹಾಗೂ ಸಂಚಾರಿ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.

Comments are closed.