ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಬಸ್ ಸ್ಟ್ಯಾಂಡ್ ಹಾಗೂ ಬೀಚ್ ಬದಿಯ ಹೆದ್ದಾರಿಯಲ್ಲಿ ಮಾನಸಿಕ ಖಿನ್ನತೆಯಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಓರ್ವ ವಯಸ್ಕ ಮಹಿಳೆ ಹಾಗೂ ಓರ್ವ ವಯಸ್ಕ ಪುರುಷರನ್ನು ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಪವನ್ ನಾಯಕ್ ಸೂಚನೆಯಂತೆ ಸಿಬ್ಬಂದಿಗಳಾದ ರಾಜು ನಾಯಕ್ ಹಾಗೂ ಮಹಿಳಾ ಸಿಬ್ಬಂದಿ ವಿಮಲ, 24×7 ಇಬ್ರಾಹಿಂ ಗಂಗೊಳ್ಳಿ ಇವರ ನೇತೃತ್ವದಲ್ಲಿ ಹೆದ್ದಾರಿ ಬದಿಯಿಂದ ರಕ್ಷಿಸಿ ಉಡುಪಿ ಸಮೀಪದ ಹೊಸ ಬದುಕು ಆಶ್ರಮದಲ್ಲಿ ಆಶ್ರಯ ಹಾಗೂ ಪುನರ್ವಸತಿಗಾಗಿ ಟೀಮ್ ಎಮ್.ಎಚ್.ಐ ಅಂಬುಲೆನ್ಸ್ ಗಂಗೊಳ್ಳಿ ಮೂಲಕ ಕಳುಹಿಸಿಕೊಡಲಾಯಿತು.


ಕಾರ್ಯಾಚರಣೆಯಲ್ಲಿ ತ್ರಾಸಿಯ ಲಿಪ್ಟನ್ ಒಲಿವೇರ, ವಿಕಾಸ್ ಮೊಗವೀರ ನಾಯಕವಾಡಿ, ವಿಲ್ಸನ್ ರೆಬೆರಾವ್ ಗಂಗೊಳ್ಳಿ, ಖಾಜಿ ಸಮಿಉಲ್ಲಾ ಹಾಗೂ ಇತರರು ಸಹಕರಿಸಿದರು.
ಆಶ್ರಮದ ವಿನಯ್ಚಂದ್ರ ಸಾಸ್ತಾನ ಹಾಗೂ ರಾಜಶ್ರೀ ಇವರು ಇಬ್ಬರನ್ನು ಸಹ ಆತ್ಮೀಯವಾಗಿ ತಮ್ಮ ಆಶ್ರಮಕ್ಕೆ ಬರಮಾಡಿಕೊಂಡರು.
Comments are closed.