ಕುಂದಾಪುರ: ಸರಕಾರ ಅನ್ನ ಭಾಗ್ಯ ಯೋಜನೆಯಡಿ ಉಚಿತವಾಗಿ ಸಿಗುವ 107 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಕುಂದಾಪುರದ ಆಹಾರ ನಿರೀಕ್ಷಕ ಸುರೇಶ್ ಎಚ್. ಎಸ್. ಹಾಗೂ ಗಂಗೊಳ್ಳಿ ಪೊಲೀಸರ ನೇತೃತ್ವದ ತಂಡ ತ್ರಾಸಿ ಮರವಂತೆ ಬೀಚ್ ಬಳಿ ಪತ್ತೆಹಚ್ಚಿದೆ.

ಲಾರಿ ಚಾಲಕ ರಾಮನಗರ ಮಾಗಡಿ ಮೂಲದ ನಂಜುಂಡ ಕೆ.ಆರ್. (28) ಅವರನ್ನು ವಶಕ್ಕೆ ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು ಆತನಿಂದ ಅಂದಾಜು 2 ಲಕ್ಷದ 56 ಸಾವಿರದ 800 ರೂ ಮೌಲ್ಯದ 107 ಕ್ವಿಂಟಾಲ್ ಅಕ್ಕಿ, 11 ಲಕ್ಷ ಮೌಲ್ಯದ ಲಾರಿ ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ಭಟ್ಕಳದ ಶಫೀಕ್ ಸಾಹೇಬ್ ಎನ್ನುವರು ತಮ್ಮ ಲಾರಿಗೆ 214 ಚೀಲಗಳಲ್ಲಿ 2.56 ಲಕ್ಷ ರೂ. ಮೌಲ್ಯದ 107 ಕ್ವಿಂಟಾಲ್ ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿ, ಮಂಡ್ಯದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಅಗೋ ರೈಸ್ ಇಂಡಸ್ಟ್ರೀಸ್ ರೈಸ್ ಮಿಲ್ಲಿಗೆ ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಬಗ್ಗೆ ತನಿಖೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಆಹಾರ ನಿರೀಕ್ಷಕರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ, ಬೈಂದೂರು ಪ್ರಭಾರ ವೃತ್ತನಿರೀಕ್ಷಕ ಅನಿಲ್ ಚೌಹ್ಹಾಣ್, ಗಂಗೊಳ್ಳಿ ಪೊಲೀಸ್ ಠಾಣೆ ಕಾನೂನು ಸುವ್ಯವಸ್ಥೆ ಪಿಎಸ್ಐ ಪವನ್ ನಾಯಕ್ ಹಾಗೂ ಸಹಾಯಕ ಉಪನಿರೀಕ್ಷಕರಾದ ನವೀನ್, ಆನಂದ್, ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ರಾಜು ನಾಯ್ಕ, ಸಂದೀಪ ಕುರಣಿ, ರಾಘವೇಂದ್ರ ಪೂಜಾರಿ, ರಿತೇಶ್ ಕುಮಾರ್ ಶೆಟ್ಟಿ, ಮಾಳಿಂಗರಾಯ ಹೆಬ್ಬಾಳ, ಮಲ್ಲಪ್ಪ ಮೊದಲಾದವರು ಭಾಗಹಿಸಿದ್ದರು.
Comments are closed.