ಕರಾವಳಿ

ಪರವಾನಿಗೆ ಇಲ್ಲದೆ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆ ನೀಡುತ್ತಿರುವ ಆರೋಪ: ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಪರವಾನಿಗೆ ಇಲ್ಲದೆ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಅನೀಲ್ ಕುಮಾರ್ ಡಿ ಹಾಗೂ ಸಿಬ್ಬಂದಿಗಳು ತೆಂಕನಿಡಿಯೂರು ಗ್ರಾಮದ ಬೆಳ್ಳಲೆ ಹಿರಣ್ಯಧಾಮ ಲೇಔಟ್ ನಿವಾಸಿ ಆರ್.ರಶೀದ್‌ ಎಂಬವರ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಮನೆಯ ಆವರಣದಲ್ಲಿ ಸುಮಾರು 18 ವೈಟ್ ಬೋರ್ಡ್ ಕಾರುಗಳು ಇರುವುದು ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ (ರಿ) ಮಲ್ಪೆ ಘಟಕ ಇದರ ಅಧ್ಯಕ್ಷರು ಮತ್ತು ಸದಸ್ಯರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದರ ಹಿನ್ನೆಲೆಯಲ್ಲಿ ಪೊಲೀಸರ ತಂಡಕ್ಕೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ರಶೀದ್ ಅವರ ಮನೆಯಲ್ಲಿ ವಿವಿಧ ಮಾದರಿಯ ಸುಮಾರು ಹದಿನೆಂಟು ವೈಟ್ ಬೋರ್ಡ್ ಕಾರುಗಳು ಪತ್ತೆಯಾಗಿದ್ದು ಈ ಕುರಿತು ರಶೀದ್ ಅವರ ಬಳಿ ವಿಚಾರಿಸಿದ ವೇಳೆ ಪರವಾನಿಗೆ ಪಡೆಯದೇ ಕಾರುಗಳನ್ನು ಬಾಡಿಗೆಗೆ ನೀಡುವುದನ್ನು ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ:192(A), 66, 187 IMV ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments are closed.