ಕರಾವಳಿ

ಕುಂದಾಪುರ ನಗರ ಠಾಣೆ ನೂತನ ಇನ್ಸ್‌ಪೆಕ್ಟರ್ ಆಗಿ ಜಯರಾಮ್ ಡಿ. ಗೌಡ, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸಂತೋಷ್ ಕಾಯ್ಕಿಣಿ ನೇಮಕ

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವಾರು ತಿಂಗಳಿನಿಂದ ಖಾಲಿಯಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ಜಯರಾಮ್ ಡಿ. ಗೌಡ ಅವರನ್ನು ನೇಮಿಸಿ ಆದೇಶಿಸಲಾಗಿದೆ.

(ಜಯರಾಮ್ ಗೌಡ, ಸಂತೋಷ್ ಕಾಯ್ಕಿಣಿ)

ಪ್ರಸ್ತುತ ಶಂಕರನಾರಾಯಣದಲ್ಲಿ ಕಾರ್ಯಚರಿಸುವ ಕುಂದಾಪುರ ವೃತ್ತದ ಪೊಲೀಸ್ ವೃತ್ತನಿರೀಕ್ಷಕರಾಗಿ ಜಯರಾಮ್ ಗೌಡ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಂದಾಪುರ ಪೊಲೀಸ್ ನೂತನ ವೃತ್ತನಿರೀಕ್ಷಕರಾಗಿ ಸಂತೋಷ್ ಕಾಯ್ಕಿಣಿ ಅವರನ್ನು ನೇಮಿಸಲಾಗಿದ್ದು ಇವರು ಪ್ರಸ್ತುತ ಮುರ್ಡೇಶ್ವರ ವೃತ್ತನಿರೀಕ್ಷಕರಾಗಿದ್ದಾರೆ.

 

ಇನ್ನು ಬೈಂದೂರು ವೃತ್ತನಿರೀಕ್ಷಕರಾಗಿದ್ದ ಸವೀತ್ರತೇಜ್ ಪಿ.ಡಿ ಅವರನ್ನು ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾಯಿಸಲಾಗಿದ್ದು ಬೈಂದೂರು ನೂತನ ವೃತ್ತನಿರೀಕ್ಷಕರಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಶಿವಕುಮಾರ್ ಬಿ. ಅವರನ್ನು ನೇಮಿಸಲಾಗಿದೆ.

ರಾಜ್ಯಾದ್ಯಂತ ಸುಮಾರು 131 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಿ ಆದೇಶಿಸಲಾಗಿದೆ.

Comments are closed.