ಕೊಲ್ಲೂರು: ಇಲ್ಲಿನ ದೇವಸ್ಥಾನ ಸಮೀಪವಿರುವ ಕೊಲ್ಲೂರು ಬಸ್ ಸ್ಟಾಂಡ್ ಸಮೀಪದ ಖಾಲಿ ಜಾಗದಲ್ಲಿ ಯಾರೋ ಬಾಯಲ್ಲಿ ನೊರೆ ಬರುವ ಸ್ಥಿತಿಯಲ್ಲಿ ಅಸ್ವಸ್ಥಗೊಂಡು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ.

ಸುಮಾರು 70 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಬಿಳಿ ಬಣ್ಣದ ಷರ್ಟ್ ಹಾಗೂ ಪಂಚೆಯನ್ನು ಉಟ್ಟುಕೊಂಡಿದ್ದು ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಕೊಲ್ಲೂರು ಪೊಲೀಸ್ ಸ್ಟೇಶನ್ 9480805460 ಗೆ ಮಾಹಿತಿ ನೀಡಬೇಕಾಗಿ ಕೊಲ್ಲೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.