ಉಡುಪಿ: ಮಗುವನ್ನು ನೇಣಿಗೆ ಹಾಕಿ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಜಾಲು ಸಮೀಪದ ಹೇರಂಜೆ ಕ್ರಾಸ್ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಸುಷ್ಮಿತಾ (35) ಹಾಗೂ ಅವರ ಮಗು ಶ್ರೇಷ್ಠ (1ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ.
‘ರೀ ಸಾರಿ…ನಾನೇನೆ ತಪ್ಪು ಮಾಡಿದ್ರು ಕ್ಷಮಿಸಿ. ನನ್ನ ಮಗುನಾ ನಾನ್ ಇರುವಲ್ಲಿ ಕರಕೊಂಡು ಹೋಗ್ತಿದ್ದೀನಿ. ನನ್ನ ಸಾವಿಗೆ ನಾನೇ ಕಾರಣ’ ಎಂಬುದಾಗಿ ಮರಣ ಪತ್ರ ಬರೆದಿಟ್ಟು ಸುಷ್ಮಿತಾ ತನ್ನ ಮಗು ಜೊತೆ ನೇಣಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಪತಿಯ ಮೇಲಿನ ಹಳೆಯ ಕೊಲೆ ಯತ್ನ ಕೇಸು ನ್ಯಾಯಾಲಯದಲ್ಲಿ ತನಿಖೆಗೊಳಪಟ್ಟು ಶಿಕ್ಷೆಯಾಗಿದ್ದು ಈ ಭಯದಲ್ಲಿ ನೊಂದು ಈ ಕೃತ್ಯ ಮಾಡಿಕೊಂಡಿರುವ ಬಗ್ಗೆ ಅಂದಾಜಿಸಲಾಗಿದೆ.
ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Comments are closed.