ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕಾ ನದಿ ಬಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆಯ ಮೃತದೇಹವು ಅವರು ಕಾಣೆಯಾದ ಮೂರು ಕಿ.ಮೀ ದೂರದಲ್ಲಿ ಇಂದು (ಆ.30 ಶನಿವಾರ) ಪತ್ತೆಯಾಗಿದೆ.

ಬೆಂಗಳೂರಿನ ವಸುಧಾ ಚಕ್ರವರ್ತಿ(46) ಮೃತ ಮಹಿಳೆ. ಇವರು ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿದ್ದು ಅಲ್ಲೇ ಕಾರು ನಿಲ್ಲಿಸಿ ಸೌರ್ಪಣಿಕ ನದಿ ಬಳಿ ನಾಪತ್ತೆಯಾಗಿದ್ದರು. ಇವರು ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿತ್ತು. ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ತೀವ್ರ ಹುಡುಕಾಟ ನಡೆಸಿತ್ತು. ಇದೀಗ ಮಹಿಳೆಯ ಮೃತದೇಹ ಕೊಲ್ಲೂರು ದೇವಸ್ಥಾನದಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿ ಪತ್ತೆಯಾಗಿದೆ.
ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಮೊದಲಾದವರು ಭೇಟಿ ನೀಡಿದ್ದಾರೆ.
Comments are closed.