ಕರಾವಳಿ

ಕುಂದಾಪುರ ಶಾಸಕರ ಪ್ರಯತ್ನದಿಂದ ತೊಂಬಟ್ಟಿಗೆ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಬಸ್ ಪುನರ್ ಸಂಚಾರ!

Pinterest LinkedIn Tumblr

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ಕೋಟೇಶ್ವರ, ಬಿದ್ಕಲ್‌ಕಟ್ಟೆ, ಹಾಲಾಡಿ ಅಮಾಸೆಬೈಲು ಮಾರ್ಗವಾಗಿ ತೊಂಬಟ್ಟಿಗೆ ಸರ್ಕಾರಿ ಬಸ್ ಗಳ (ಕೆ.ಎಸ್.ಆರ್.ಟಿ. ಸಿ) ಸಂಚಾರ ಸಮರ್ಪಕವಾಗಿರದ ಕಾರಣ ಗ್ರಾಮೀಣ ಭಾಗ ಸೇರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸಲು ಅಗತ್ಯ ಸಮಯಕ್ಕೆ ಸರ್ಕಾರಿ ಬಸ್ ಗಳ ಸೇವೆ ಇಲ್ಲದ ಕಾರಣ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ವಿಧಾನ ಸಭೆಯಲ್ಲಿ ಸಾರಿಗೆ ಸಚಿವರ ಜೊತೆ ಮಾತನಾಡಿದ್ದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ಇರುವುದರಿಂದ ಶೀಘ್ರವಾಗಿ ಸರ್ಕಾರಿ ಬಸ್‌ಗಳ ಸಂರ್ಪಕ ಓಡಾಟಕ್ಕೆ‌ ಶಾಸಕರು ಮನವಿ ಮಾಡಿದ್ದು ಸಾರಿಗೆ ಇಲಾಖೆಯ ಸಚಿವರ ಸ್ಪಂದನೆ ಮೇರೆಗೆ ಕುಂದಾಪುರದಿಂದ ತೊಂಬಟ್ಟಿಗೆ ಶಾಲಾ ವಿದ್ಯಾರ್ಥಿಗಳ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಸಾರಿಗೆ ನಿಗಮದ ಬಸ್ ಪ್ರಾರಂಭಿಸಲು ಅವಕಾಶವನ್ನು ಜರೂರು ಆದೇಶ ಪತ್ರವನ್ನ ಹೊರಡಿಸಲಾಗಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಶಾಸಕರ  ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.