ಕರಾವಳಿ

ಪೆರ್ಡೂರಿನ ಸಿಂಚನಾ ಕೊರಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 85.92% ಪಡೆದು ‘ವಿಶಿಷ್ಟ ಶ್ರೇಣಿ’ಯಲ್ಲಿ ತೇರ್ಗಡೆ

Pinterest LinkedIn Tumblr

ಉಡುಪಿ: ಪೆರ್ಡೂರು ಸರಕಾರಿ ಶಾಲೆಯ ವಿದ್ಯಾರ್ಥಿನಿ ಸಿಂಚನಾ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 537 ಅಂಕ (85.92%) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಮುದಾಯಕ್ಕೆ ಹೆಮ್ಮೆತಂದಿದ್ದಾರೆ.

ಗ್ರಾಮಪಂಚಾಯತ್‌ನಲ್ಲಿ ಕೆಲಸ ಮಾಡುವ ಪ.ಪಂಗಡ ಸಮುದಾಯದ ಸತೀಶ್ ಹಾಗೂ ಗೃಹಿಣಿ ಗುಣವತಿ ದಂಪತಿಗಳ ಪುತ್ರಿಯಾಗಿರುವ ಸಿಂಚನಾ ಪೆರ್ಡೂರಿನ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದಾರೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಮುಂದುವರಿದು ಇಂಜಿನಿಯರಿಂಗ್ ಮಾಡುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Comments are closed.