ಕರಾವಳಿ

ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿದ ಸುಸಜ್ಜಿತ ‘ಎಕ್ಸಿಕ್ಯೂಟಿವ್ ಲಾಂಜ್’ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ಪ್ರಯಾಣಿಕರ ಸೌಕರ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ತನ್ನ ಬದ್ಧತೆಯನ್ನು ಮುಂದುವರೆಸುತ್ತಿರುವ ಕೊಂಕಣ ರೈಲ್ವೆಯ ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ನೂತನ ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿಯನ್ನು (ಎಕ್ಸಿಕ್ಯೂಟಿವ್ ಲಾಂಜ್) ಉದ್ಘಾಟಿಸಲಾಯಿತು.

ಈ ಅತ್ಯಾಧುನಿಕ ಸೌಲಭ್ಯವು ಕೊಂಕಣ ರೈಲ್ವೆಯ ಮೂಲಕ ಬೈಂದೂರು ಹಾಗೂ ತಾಲೂಕಿನ‌ ವಿವಿಧ ಪ್ರಮುಖ ಪ್ರವಾಸಿ ಹಾಗೂ ಆಧ್ಯಾತ್ಮಿಕ ಕೇಂದ್ರಕ್ಕೆ ಆಗಮಿಸುವ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿದೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ಅಧ್ಯಕ್ಷರು, ಆಡಳಿತ ನಿರ್ದೇಶಕರಾದ ಸಂತೋಷ್ ಕುಮಾರ್ ಝಾ, ಕಾರಾವಾರ ಪ್ರಾದೇಶಿಕ ರೈಲ್ವೇ ಪ್ರಬಂಧಕರಾದ ಆಶಾ ಶೆಟ್ಟಿ, ರೈಲ್ವೆ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ದಿಲೀಪ್ ಭಟ್,  ಮುಂಬೈ ಉಪಮುಖ್ಯ ವಾಣಿಜ್ಯ ಪ್ರಬಂಧಕರು ಆರ್.ಡಿ. ಗೋಲಾಬ್, ಕೊಂಕಣ ರೈಲ್ವೆ ಕಾರಾವಾರ ಉಪಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಪ್ರಾಂತೀಯ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್ ರಾಹುಲ್ ಬಾಡ್ಕರ್, ಹಿರಿಯ ಪ್ರಾಂತೀಯ ಇಂಜಿನಿಯರ್ ಬಿ.ಎಸ್. ನಡ್ಗೆ, ಕೊಂಕಣ ರೈಲ್ವೆ ಮಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಸಹಾಯಕ ವಾಣಿಜ್ಯ ಪ್ರಬಂಧಕರಾದ ಜಿ.ಡಿ. ಮೀನಾ ಮೊದಲಾದವರಿದ್ದರು.

ಕಡಿಮೆ ದರದಲ್ಲಿ ಸುಸಜ್ಜಿತ ಸೇವೆ:

ಮೂಕಾಂಬಿಕಾ ರಸ್ತೆ ಬೈಂದೂರು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನ, ಮರವಂತೆ, ಒತ್ತಿನೆಣೆ ಸಹಿತ ಹಲವು ಧಾರ್ಮಿಕ ಹಾಗೂ ನೈಸರ್ಗಿಕ ಪ್ರದೇಶಕ್ಕೆ ಭೇಟಿ ನೀಡುತ್ತಾರೆ.  ರೈಲಿನಲ್ಲಿ ಆಗಾಗ್ಗೆ ಪ್ರಯಾಣಿಸುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿಯಲ್ಲಿ, ಪ್ರಯಾಣಿಕರು ತಮ್ಮ ಪ್ರಯಾಣದ ಮುನ್ನಾ ಅಥವಾ ಮೊದಲು ತಂಗಲು ಸಾಧ್ಯವಿದೆ. ಈ ವಿಶ್ರಾಂತಿ ಗೃಹವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮೆತ್ತನೆಯ ಸೋಫಾ ಆಸನ, ಉಚಿತ ವೈ-ಫೈ, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳೊಂದಿಗೆ ಓದುವ ಗ್ಯಾಲರಿ ಮತ್ತು ಮನರಂಜನೆಗಾಗಿ ದೂರದರ್ಶನದೊಂದಿಗೆ ಪ್ರಶಾಂತ ವಾತಾವರಣವನ್ನು ನೀಡುತ್ತದೆ. 24×7 ಕೆಫೆಯು ಪ್ರಯಾಣಿಕರಿಗೆ ಎಲ್ಲಾ ಸಮಯದಲ್ಲೂ ಉಪಾಹಾರ ಪೂರೈಸುತ್ತದೆ, ಮೊಬೈಲ್ ಸಾಧನಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಚಾರ್ಜಿಂಗ್ ಸೌಲಭ್ಯಗಳು ಲಭ್ಯವಿದೆ. ಈ ಆಧುನಿಕ ಸೌಲಭ್ಯವನ್ನು ಪ್ರಯಾಣಿಕರಿಗೆ ವಿಶ್ರಾಂತಿ ಮತ್ತು ಆರಾಮದಾಯಕವಾಗಿ ಆಯಾಸವನ್ನು  ನಿವಾರಿಸುವಲ್ಲಿ ಸಹಕಾರಿಯಾಗಿದೆ. ಈ ಕಾರ್ಯನಿರ್ವಾಹಕ ವಿಶ್ರಾಂತಿ ಗೃಹವು ಗಂಟೆಗೆ ಕೇವಲ 50 ರೂ.ಗಳ ದರದಲ್ಲಿ ಲಭ್ಯವಿದೆ.

Comments are closed.