ಕುಂದಾಪುರ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ, ಪುರಾತನ ದೇವಾಲಯ ಹಾಗೂ ಊರ-ಪರವೂರ ಅತೀ ಹೆಚ್ಚು ನವ ಜೋಡಿಗಳು ಸಪ್ತಪದಿ ತುಳಿದ ಪುಣ್ಯ ಸ್ಥಳವಾಗಿರುವ ಕುಂದಾಪುರ ತಾಲೂಕಿನ ಜನ್ನಾಡಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಫೆ.26 ರಂದು ಬುಧವಾರ ಮಹಾಶಿವರಾತ್ರಿ ಉತ್ಸವ ನಡೆಯಲಿದೆ.

ಈ ಪ್ರಯಕ್ತ ಅಂದು ಮುಂಜಾನೆ ಗಂಟೆ 5ರಿಂದ ರಾತ್ರಿ 11.30ರ ತನಕ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಗಂಟೆ 7ರಿಂದ 11.30 ರತನಕ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ರಾಚನಬೆಟ್ಟು ಜನ್ನಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ತದನಂತರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಹಾಗೂ ರಾತ್ರಿ ಲಘು ಉಪಹಾರ ವ್ಯವಸ್ಥೆ ಇರಲಿದೆ. ಈ ಎಲ್ಲಾ ದೇವತಾ ಕಾರ್ಯಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಅರ್ಚಕರು ಹಾಗೂ ಜನ್ನಾಡಿ ಸಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.
Comments are closed.