ಕರಾವಳಿ

ಮಂಗಳೂರಿನಿಂದ ಹೊರಡಲಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು; ಡಿ.26ರಿಂದ ಮೂರು ದಿನ ಪ್ರಾಯೋಗಿಕ ಓಡಾಟ

Pinterest LinkedIn Tumblr

ಮಂಗಳೂರು: ಸೆಮಿ ಹೈ ಸ್ಪೀಡ್‌ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪಿದ್ದು, ಈ ರೈಲು ಮಂಗಳವಾರದಿಂದ ಮೂರು ದಿನ ಪ್ರಾಯೋಗಿಕ ಓಡಾಟ ನಡೆಸಲಿದೆ.

ಮಂಗಳವಾರ ಬೆಳಗ್ಗೆ 8:30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 1:15ಕ್ಕೆ ಮಡಗಾಂವ್ (ಗೋವಾ) ತಲುಪಲಿದೆ. ವಾಪಾಸು ಮಧ್ಯಾಹ್ನ 1:45ಕ್ಕೆ ಮಡಗಾಂವ್ ನಿಂದ ಹೊರಟು ಸಂಜೆ 6:30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ನೂತನ ರೈಲು ಚೆನ್ನೈಯಿಂದ ಹೊರಟು ಕೇರಳದ ಕೋಝಿಕೋಡ್ ಮಾರ್ಗ ಸೋಮವಾರ ಮಂಗಳೂರು ತಲುಪಿದೆ.

ಮಂಗಳೂರು ಸೆಂಟ್ರಲ್ – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ಡಿಸೆಂಬರ್ 30ರಂದು ಆರಂಭಿಸಲು ದಕ್ಷಿಣ ರೈಲ್ವೆ ಸಜ್ಜಾಗಿದೆ. ಆದರೆ ಈ ಬಗ್ಗೆ ರೈಲ್ವೆ ಮಂಡಳಿ ಅಧಿಕೃತ ಪ್ರಕಟನೆ ಹೊರಡಿಸಿಲ್ಲ.

ಮಂಗಳೂರು – ಮಡಗಾಂವ್ ಸಹಿತ 6 ವಂದೇಭಾರತ್ ಎಕ್ಸ್‌ಪ್ರೆಸ್‌ ರೈಲುಗಳು ಹಾಗೂ ಮಂಗಳೂರು ಸೆಂಟ್ರಲ್ ನಿಲ್ದಾಣದ ಹೆಚ್ಚುವರಿ ಪ್ಲಾಟ್ ಫಾರಂ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಮೂಲಗಳು ತಿಳಿಸಿದೆ.

Comments are closed.