ಕರಾವಳಿ

ಕುಂದಾಪುರ: ಶ್ರೀ ನಾರಾಯಣ ಗುರು ಯುವಕಮಂಡಲದ ಶಾರದೋತ್ಸವದಲ್ಲಿ ಪಾಲ್ಘೊಂಡ ಶಾಸಕ ಕಿರಣ್ ಕೊಡ್ಗಿ

Pinterest LinkedIn Tumblr

ಕುಂದಾಪುರ: ಶ್ರೀ ನಾರಾಯಣ ಗುರು ಯುವಕಮಂಡಲದ ಶಾರದೋತ್ಸವದಲ್ಲಿ ಪಾಲ್ಘೊಂಡ ಶಾಸಕ ಕಿರಣ್ ಕೊಡ್ಗಿ
ಕುಂದಾಪುರ: ಇಲ್ಲಿನ ಶ್ರೀ ನಾರಾಯಣ ಗುರು ಯುವಕಮಂಡಲದಿಂದ ನಡೆಯುತ್ತಿರುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಪಾಲ್ಗೊಂಡರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಶಾಸಕರನ್ನು ಬರಮಾಡಿಕೊಂಡು ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭ ಶ್ರೀ ನಾರಾಯಣ ಗುರು ಯುವಕಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಬೀಜಾಡಿ, ಬಿಲ್ಲವ ಮುಖಂಡರಾದ ನಾರಾಯಣ ಬಿಲ್ಲವ, ದಿವಾಕರ ಕಡ್ಗಿಮನೆ, ರಾಜೇಶ್ ಕಡ್ಗಿಮನೆ, ಮೊಗವೀರ ಸಂಘಟನೆಯ ಪ್ರಮುಖರಾದ ಸದಾನಂದ ಬಳ್ಕೂರು ಇದ್ದರು.

Comments are closed.