ಬೆಂಗಳೂರು: ಶಿವಮೊಗ್ಗದಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಆರಂಭಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 11 ರಂದು ವಿಮಾನ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಈ ಹಿಂದೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿದ್ದರು. ಆದರೆ, ಇದೀಗ ಆಗಸ್ಟ್ 31ರಿಂದ ಬೆಂಗಳೂರು ಶಿವಮೊಗ್ಗ ಮಧ್ಯೆ ವಿಮಾನ ಸಂಚಾರ ಆರಂಭವಾಗುವ ಬಗ್ಗೆ ಮಾಹಿತಿ ದೊರೆತಿದೆ. ಈ ವಿಚಾರವಾಗಿ ಇಂಡಿಗೊ ವಿಮಾನಯಾನ ಸಂಸ್ಥೆಯ ವೆಬ್ಸೈಟ್ನಲ್ಲೂ ಮಾಹಿತಿ ನೀಡಲಾಗಿದೆ.

(ಸಾಂದರ್ಭಿಕ ಚಿತ್ರ)
ಬೆಂಗಳೂರಿನಿಂದ ಬೆಳಗ್ಗೆ 9.50ಕ್ಕೆ ಹೊರಡಲಿರುವ ವಿಮಾನ 11.05ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ 11.25ಕ್ಕೆ ಹೊಡಲಿರುವ ವಿಮಾನ 12.25ಕ್ಕೆ ಬೆಂಗಳೂರು ತಲುಪಲಿದೆ ಎಂದು ಇಂಡಿಗೊ ವಿಮಾನಯಾನ ಸಂಸ್ಥೆಯ ಟಿಕೆಟ್ ಬುಕಿಂಗ್ ವಿಂಡೋದಲ್ಲಿರುವ ಮಾಹಿತಿಯಿದೆ.
ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಬಂದಿಳಿದಿದ್ದಲ್ಲದೆ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದರು. ಸದ್ಯ ಶಿವಮೊಗ್ಗ ಬೆಂಗಳೂರು ಮಧ್ಯೆ ಮೊದಲಿಗೆ ವಿಮಾನ ಹಾರಾಟ ಆರಂಭವಾಗಲಿದೆ. ಆ ನಂತರ ಉಳಿದ ಮಾರ್ಗಗಳಲ್ಲಿಯೂ ಹಾರಾಟ ಆರಂಭಿಸಲಾಗುತ್ತದೆ ಎನ್ನಲಾಗಿದೆ.
ಆಗಸ್ಟ್ 31ರ ಬೆಳಗ್ಗೆ 9:50ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ವಿಮಾನ ಹಾರಾಟ ಆರಂಭಿಸಿದೆ. ಈ ವಿಮಾನ 11:05ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಟಿಕೆಟ್ ದರ 6227 ರೂ. ಇರಲಿದೆ. ಆದರೆ ಸೆಪ್ಟೆಂಬರ್ 1ರಂದು ವಿಮಾನ ಟಿಕೆಟ್ ದರವನ್ನು ಇಳಿಕೆ ಮಾಡಲಾಗಿದೆ. 4 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.
Comments are closed.