ಕುಂದಾಪುರ: ಪ್ರಸಿದ್ಧ ಪ್ರವಾಸಿ ತಾಣವಾದ ಕೋಡಿ ಸೀ ವಾಕ್ ಗೆ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಭೇಟಿ ನೀಡಿ ವೀಕ್ಷಿಸಿದರು.

ಭಾರಿ ಮಳೆಯಿಂದಾಗಿ ಬಾರಿ ಗಾತ್ರದ ಅಲೆಗಳು ಸೀವಾಕ್ ಗೆ ಅಪ್ಪಳಿಸುತ್ತಿದ್ದು, ಅಲೆಗಳು ತಡೆಗೋಡೆಗೆ ಅಪ್ಪಳಿಸಿ ಸೀ ವಾಕ್ ಒಳ ಆವರಣ ಪ್ರವೇಶಿಸುತ್ತಿದೆ. ಸೀ ವಾಕ್ ಭದ್ರತೆ ಅಪಾಯ ತಂದೊಡ್ಡಿದ್ದು ಅಲೆಯ ಅರಿವಿಲ್ಲದೆ ಸಿವಾಕ್ ತುದಿಗೆ ಸಾಗುವ ಜನರು ಅಪಾಯಕ್ಕೆ ತುತ್ತಾಗುವ ಸಾಧ್ಯತೆಯಿದ್ದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ, ತುರ್ತು ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಬಿಜೆಪಿಯ ಕ್ಷೇತ್ರದ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಮಹೇಶ್ ಪೂಜಾರಿ ಕೋಡಿ, ಸಾಮಾಜಿಕ ಹೋರಾಟಗಾರ ಅಶೋಕ ಪೂಜಾರಿ ಕೋಡಿ, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ್ ಕಾಂಚನ ಕೋಡಿಯ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.
Comments are closed.