ಕರ್ನಾಟಕ

ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ: ಕಾಂಗ್ರೆಸ್‌ಗೆ ಸವಾಲು ಹಾಕಿದ ಶೋಭಾ ಕರಂದ್ಲಾಜೆ..!

Pinterest LinkedIn Tumblr

ಬೆಂಗಳೂರು: ವಿನಾಶಕಾಲೆ, ವಿಪರೀತ ಬುದ್ದಿ ಎಂಬ ಗಾದೆ ಮಾತಿದೆ. ವಿನಾಶ ಬಂದಾಗ ಬುದ್ದಿ ಹೊಳೆಯಲ್ಲ, ವಿಪರೀತವಾಗಿ ಯೋಚನೆ ಮಾಡ್ತಾರೆ. ಕಾಂಗ್ರೆಸ್‌ಗೂ ವಿನಾಶ ಕಾಲ ಬಂದಿದೆ ಎಂದು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಿಎಫ್‌ಐ ಬಾಂಬ್ ಬ್ಲಾಸ್ಟ್ ಮಾಡಿದ್ದು, ಈಗಾಗಲೇ ಅದನ್ನ ಬ್ಯಾನ್ ಮಾಡಲಾಗಿದೆ. ಆದ್ರೆ, ಇವತ್ತು ಕಾಂಗ್ರೆಸ್ ಹೇಳ್ತಿದೆ ಪಿಎಫ್‌ಐ ಬ್ಯಾನ್ ಮಾಡ್ತೀವಿ ಅಂತ. ಆದ್ರೆ, ಅವರ ಉದ್ದೇಶ ಭಜರಂಗದಳ ಬ್ಯಾನ್ ಮಾಡಬೇಕೆಂದು. ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಆರ್‌ಎಸ್ಎಸ್ ಅನ್ನ ಬ್ಯಾನ್ ಮಾಡಿತ್ತು. ಆದ್ರೆ, ಇವತ್ತು ಜಗತ್ತಿನ ಅತಿ ದೊಡ್ಡ ಸಂಘಟನೆ ಆರ್‌ಎಸ್ಎಸ್ ಆಗಿದೆ. ಆರ್‌ಎಸ್ಎಸ್ ನಲ್ಲಿ ವಿವಿಧ ವಿಭಾಗ ಕೆಲಸ ಮಾಡ್ತಿದೆ. ನಿಮಗೆ ತಾಕತ್ ಇದ್ದರೆ, ಭಜರಂಗದಳ ಬ್ಯಾನ್ ಮಾಡಿ ತೋರಿಸಿ ಎಂದು ಗುಡುಗಿದ ಅವರು, ಆರ್‌ಎಸ್ಎಸ್ ನ ಯುವಕರ ದಳ ಭಜರಂಗದಳ, ಇದು ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ, ದೇಶ ವಿರೋಧಿ ಸಂಘಟನೆ ಅಲ್ಲ. ಇವತ್ತು ಭಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ಕಾಂಗ್ರೆಸ್ ಇಟ್ಟಿದೆ. ದೇಶದ್ರೋಹಿ ಪಿಎಫ್ಐ ಜತೆ ದೇಶಪ್ರೇಮಿ ಭಜರಂಗದಳ ಹೋಲಿಸಿರೋದು ಸರಿಯಲ್ಲ. ನಿಮಗೆ ತಾಕತ್ ಇದ್ದರೆ ಭಜರಂಗದಳ ನಿಷೇಧ ಮಾಡಿ ನೋಡಿ. ಆಗ ನಾವೂ ದೇಶಾದ್ಯಂತ ತೋರಿಸ್ತೇವೆ. ಭಜರಂಗದಳದ ನಿಷೇಧವನ್ನು ಹಿಂದೂ ಸಮಾಜ ಒಪ್ಪಲ್ಲ ಎಂದು ಗುಡುಗಿದರು.

ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಎಂದು ನಾನು ಹಿಂದೆ ಹೇಳಿದ್ದೆ. ಅದು ಇವತ್ತು ಸಾಬೀತಾಗಿದೆ. ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ. ನೀವು ಅಧಿಕಾರಕ್ಕೆ ಬಂದ್ರೆ, 10 ಸಾವಿರ ಕೋಟಿ ಮುಸ್ಲಿಮರಿಗೆ ಮೀಸಲು, ಗೋ‌ಹತ್ಯೆ ಕಾಯ್ದೆ ವಾಪಸ್, ಮತಾಂತರ ಕಾಯ್ದೆ ವಾಪಸ್ ಎಂದು ಹೇಳಿದ್ದೀರಿ. ತಾಯಿ ಎದೆ ಹಾಲು ಇಲ್ಲದಾಗ ಗೋ ಹಾಲನ್ನ ಕುಡೀತಿವಿ. ಆದ್ರೆ, ನೀವು ಗೋ ಹತ್ಯೆ ಕಾಯ್ದೆಯನ್ನೇ ತೆಗೀತೀವಿ ಅಂತ ಹೇಳ್ತೀರಿ. ಇವತ್ತು ಪಿಎಫ್‌ಐ ಇಸ್ಲಾಂ ಜೊತೆ, ಐಸಿಸ್ ಜೊತೆ ಸಂಬಂಧ ಇಟ್ಟುಕೊಂಡಿದ್ರು. ಶಿವಮೊಗ್ಗದಲ್ಲಿ ಎನ್ಐಎ ದಾಳಿ ನಡೆಸಿದಾಗ ಸಿಕ್ಕಿಬಿದ್ರು. ಅವರೆಲ್ಲರೂ ಎನ್ಐಎ ವಿಚಾರಣೆ ನಡೆಸುತ್ತಿದೆ. ಯಾರೆಲ್ಲಾ ಬಾಂಬ್ ಬ್ಲಾಸ್ಟ್ ನಲ್ಲಿ ಸಿಕ್ಕಿಬಿದ್ರು ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅಂತ ಡಿಕೆಶಿ ಹೇಳಿದ್ದಾರೆ. ಈ ಎಲ್ಲಾ ಕೃತ್ಯಗಳಿಗೆ ಸಿದ್ದರಾಮಯ್ಯ, ಡಿಕೆಶಿ ಕಾರಣ‌ ಇದೀಗ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು. ನಿಮ್ಮ ಅಜ್ಜಿ, ತಾತನ ಕಾಲದಲ್ಲಿ RSS ಬ್ಯಾನ್ ಮಾಡಿದ್ರಿ, ಈಗ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ವಿಶ್ವದ, ದೇಶದ ಅತಿ ದೊಡ್ಡ ಸಂಘಟನೆ, ಅತಿ ದೊಡ್ಡ ಪಕ್ಷ, ನಮ್ಮ ನಾಯಕ ವಿಶ್ವದ ದೊಡ್ಡ ನಾಯಕ. ನೀವು ಕೇವಲ ಮುಸ್ಲಿಂ ಓಟಲ್ಲಿ ಗೆದ್ದು ಬನ್ನಿ, ಕಾಂಗ್ರೆಸ್‌ಗೆ ತಾಕತ್ ಇದೆಯಾ.?. ಈ ಪ್ರಣಾಳಿಕೆಯಲ್ಲಿ ಕೊಟ್ಟಿರೋದು ಕೇವಲ ಒಂದು ಧರ್ಮದ ಓಲೈಕೆ ಮಾಡಲು, ಅವರನ್ನೇ ಓಲೈಕೆ ಮಾಡಿ, ಹಿಂದೂಗಳ ಓಟ್ ನಿಮಗೆ ಸಿಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

Comments are closed.