ಕರಾವಳಿ

ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಮರವಂತೆ ಭಾಗದ ಮೀನುಗಾರರ ಜೊತೆ ಕೆ. ಗೋಪಾಲ ಪೂಜಾರಿ ಮಾತುಕತೆ

Pinterest LinkedIn Tumblr

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆ ಬಂದರು ಸಮಸ್ಯೆ ಕುರಿತಾಗಿ ಮೀನುಗಾರರು ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಜೊತೆಗೆ ತಮ್ಮ ನೋವು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೀನುಗಾರ ಮುಖಂಡರು ಮತ್ತು ಮೀನುಗಾರರ ಜೊತೆ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ‌ ಮಾತುಕತೆ ನಡೆಸಿದರು.

ರಾಜ್ಯದ ಮೀನುಗಾರರಿಗೆ ನೀಡಿರುವ 10 ಲಕ್ಷ ರೂ. ಜೀವ ವಿಮೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ ಬಡ್ಡಿ ರಹಿತ ಸಾಲ ಸೇರಿದಂತೆ ಕರಾವಳಿ ಭಾಗದ ಜನರ ಅಭಿವೃದ್ಧಿಗಾಗಿ ಈಗಾಗಲೇ ಕಾಂಗ್ರೆಸ್‌ ಘೋಷಿಸಿರುವ ಕಾರ್ಯಕ್ರಮಗಳ ಬಗ್ಗೆ ಮೀನುಗಾರರ ಗಮನ ಸೆಳೆದ ಗೋಪಾಲ ಪೂಜಾರಿಯವರು ಮತದಾನ ಬಹಿಷ್ಕಾರ ಕೈಬಿಟ್ಟು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮದನ್‌ ಕುಮಾರ್‌, ಮುಖಂಡರಾದ ಎಸ್. ರಾಜು ಪೂಜಾರಿ, ಮೀನುಗಾರರ ಮುಖಂಡರಾದ ಚೌಕಿ ಉದಯ ಖಾರ್ವಿ, ಚಂದ್ರಗುಪ್ತ, ರಾಮಕೃಷ್ಣ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Comments are closed.