ಕರಾವಳಿ

ಕೋಟೇಶ್ವರದ ಹಳೆಅಳಿವೆ ಬಳಿ ಹೆಬ್ಬಾವು ರಕ್ಷಿಸಿ ಅರಣ್ಯ ಇಲಾಖೆಗೆ ನೀಡಿದ ಸ್ಥಳೀಯರು..!

Pinterest LinkedIn Tumblr

ಕುಂದಾಪುರ: ಮನೆ ಸಮೀಪ ಬಂದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ರಕ್ಷಿಸಿ ಹಿಡಿದು ಅರಣ್ಯ ಇಲಾಖೆಗೆ ನೀಡಿದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಹಳೆಅಳಿವೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ಇಲ್ಲಿನ ನಿವಾಸಿ ವಿಠಲ್ ನಾಯಕ್ ಎನ್ನುವರು ರಾತ್ರಿ ಮನೆಗೆ ತೆರಳುತ್ತಿದ್ದಾಗ ರಸ್ತೆ ಮೇಲೆ ಹೆಬ್ಬಾವನ್ನು ನೋಡೊ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅದರಂತೆಯೇ ಸ್ಥಳಕ್ಕಾಗಮಿಸಿದ ಗ್ರಾ.ಪಂ ಮಾಜಿ ಸದಸ್ಯ ಚಂದ್ರ ಮೋಹನ್, ಚಂದ್ರ, ವೆಂಕಟೇಶ್, ಸುರೇಂದ್ರ ಮಾರ್ಕೋಡು ಮೊದಲಾದವರು ಸುಮಾರು 14 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಕುಂದಾಪುರ ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ದಾರೆ.

Comments are closed.