ಉಡುಪಿ: ಒಂದೇ ದಿನ ಸಹೋದರರಿಬ್ಬರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಗುರುವಾರ ಬ್ರಹ್ಮಾವರದಲ್ಲಿ ನಡೆದಿದೆ.

ನಾಗಸ್ವರ ಮತ್ತು ಸಾಕ್ಸೋಫೋನ್ನಲ್ಲಿ ಪ್ರತಿಭಾವಂತ ಕಲಾವಿದರಾದ ದೇವಾಡಿಗರ ಬೆಟ್ಟಿನ ಗಣೇಶ್ ದೇವಾಡಿಗ(52) ಮತ್ತು ರಾಘವೇಂದ್ರ ದೇವಾಡಿಗ(ಮೋಹನ)(42) ಮೃತಪಟ್ಟವರು.
ಇಬ್ಬರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ ರಾಘವೇಂದ್ರ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಮೃತಪಟ್ಟರೆ, ಸ್ವಲ್ಪ ಸಮಯದಲ್ಲೇ ಮಣಿಪಾಲ ಆಸ್ಪತ್ರೆಯಲ್ಲಿ ಅಣ್ಣ ಗಣೇಶ್ ನಿಧನರಾದರು. ಗಣೇಶ್ ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದು ರಾಘವೇಂದ್ರ ಪತ್ನಿಯನ್ನು ಅಗಲಿದ್ದಾರೆ. ತಾಯಿ, ಸಹೋದರ, ಇಬ್ಬರು ಸಹೋದರಿಯರಿದ್ದಾರೆ.
Comments are closed.