ಬೆಂಗಳೂರು: ಬೆಂಗಳೂರು ನಗರದ ಆಕಾಶದಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭವಾಗಿದೆ. ಏಷ್ಯಾದ ಅತೀ ದೊಡ್ಡ ವೈಮಾನಿಕ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಏರೋ ಇಂಡಿಯಾ ಶೋ’ದ 14ನೇ ಆವೃತ್ತಿ ಸೋಮವಾರ ಉದ್ಘಾಟನೆಗೊಂಡಿದೆ.

ಯಲಹಂಕದ ಏರ್ ಬೇಸ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಗ್ಗೆ 9.30ಕ್ಕೆ ಏರೋಶೋ ಉದ್ಘಾಟಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಏರೋ ಇಂಡಿಯಾ 2023 ರ ಉದ್ಘಾಟನಾ ಸಮಾರಂಭದಲ್ಲಿ ಫ್ಲೈಪಾಸ್ಟ್ ಸಮಯದಲ್ಲಿ ಗುರುಕುಲ ರಚನೆಯನ್ನು ಮುನ್ನಡೆಸಿದರು.
ಆತ್ಮನಿರ್ಭರ ಕಲ್ಪನೆಯಡಿ ನಡೆಯಲಿರುವ ಏರೋ ಇಂಡಿಯಾ ಶೋದಲ್ಲಿ ದೇಶದ ವೈಮಾನಿಕ ಕ್ಷೇತ್ರದಲ್ಲಿ ಅವಕಾಶಗಳ ರನ್‌ವೇ ತೆರೆದುಕೊಳ್ಳಲಿದೆ. “ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್” ಎಂಬುದು ಏರೋ ಇಂಡಿಯಾ 2023 ರ ವಿಷಯವಾಗಿದೆ.
ವೈಮಾನಿಕ ಪ್ರದರ್ಶನ ಮಾತ್ರವಲ್ಲದೆ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (LCA)-ತೇಜಸ್, ಎಚ್ ಟಿಟಿ-40, ಡೋರ್ನಿಯರ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (LUH), ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಮತ್ತು ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ (ALH) ನಂತಹ ಸ್ಥಳೀಯ ಏರ್ ಪ್ಲಾಟ್ ಫಾರ್ಮ್ ಗಳ ರಫ್ತುಗಳನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.
Comments are closed.