ಕರಾವಳಿ

ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಫೆ.11ರಂದು ‘ಅಭಾರಿ ಮಹೋತ್ಸವ’

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ, ಕಷ್ಟ ಕಾರ್ಪಣ್ಯಗಳನ್ನು ಪರಿಹಾರ ಮಾಡುತ್ತಾ ಕಡಲ ತಡಿ ಹಾಗೂ ನದಿ ತೀರದಲ್ಲಿ ನೆಲೆಸಿದ ಶ್ರೀ ವರಾಹ ವಿಷ್ಣು ನಾರಸಿಂಹತ್ರಯರ ಸನ್ನಿಧಿ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಫೆ. 11 ಶನಿವಾರ ‘ಅಭಾರಿ ಮಹೋತ್ಸವ’ ಸೇವೆ ಜರುಗಲಿದೆ.

ಮಳೆ, ಕಾಡು ಪ್ರಾಣಿಗಳಿಂದ ರಕ್ಷಕ, ರೋಗ-ರುಜಿನಾಧಿಗಳಿಗೆ ಪರಿಹಾರ ನೀಡುವ, ವಿವಾಹ ವಿಚಾರದಲ್ಲಿ ಪ್ರಸಾದದ ಮೂಲಕ ಹರಸುವ ಜೊತೆಗೆ ಉದ್ದಿಮೆ, ಮೀನುಗಾರರ ಸಂರಕ್ಷಕನಾಗಿ ನೆಲೆನಿಂತ ‘ಶ್ರೀ ವರಾಹ ಸ್ವಾಮಿ’ ಸಾನಿಧ್ಯದಲ್ಲಿ ತಲೆಮಾರುಗಳಿಂದ ನಡೆದು ಬಂದ ಸೇವೆ ‘ಅಭಾರಿ ಮಹೋತ್ಸವ’ವು ಅಭಾರಿ ಸಮಿತಿ ನಾಡ, ಹಡವು, ಸೇನಾಪುರ ಹಾಗೂ ಆಸುಪಾಸಿನ ಗ್ರಾಮಸ್ಥರು ಹಾಗೂ ಭಕ್ತರ ಒಗ್ಗೂಡುವಿಕೆಯಲ್ಲಿ ನಡೆಯಲಿದ್ದು ವಿವಿಧ ಧಾರ್ಮಿಕ ಕಾರ್ಯಗಳು ಪಂಡಿತೋತ್ತಮರ ನೇತೃತ್ವದಲ್ಲಿ ಜರುಗಲಿದೆ. ಬೆಳಿಗ್ಗೆ 11 ಗಂಟೆಯಿಂದ ಶ್ರೀ ಗಂಗಾಧರೇಶ್ವರ ಸನ್ನಿಧಿಯಲ್ಲಿ ರುದ್ರಾಭಿಷೇಕ, ಚಂಡಿಕಾ ಹೋಮ, ವಿಷ್ಣು ಹೋಮ ಪೂರ್ಣಾಹುತಿ, ಮಹಾಪೂಜೆ, ಅನ್ನದ ರಾಶಿ ಪೂಜೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಒಂದು‌ಮುಡಿ ಅಕ್ಕಿ ನೈವೇದ್ಯವನ್ನು ದೇವರ ಎದುರು ಭಾಗ ಹರಿಯುವ ಸೌಪರ್ಣಿಕಾ ನದಿಯಲ್ಲಿ ‘ನೆಗಳನ ಗುಂಡಿಗೆ’ ಅರ್ಪಿಸಲಾಗುತ್ತದೆ. ಇದು ಮೂರು ವರ್ಷಗಳಿಗೊಮ್ಮೆ ನಡೆಯುವ ವಿಶಿಷ್ಟ ಸಂಪ್ರದಾಯವಾಗಿದೆ. ಬಳಿಕ ಭಕ್ತಾಧಿಗಳಿಗೆ ಅನ್ನ ದಾನ ನಡೆಯಲಿದೆ ಎಂದು ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಅಭಾರಿ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.