ಕರಾವಳಿ

ದುಬೈನಲ್ಲಿ ಬೈಕ್ ಅಪಘಾತ; ಬೆಳ್ತಂಗಡಿ ಮೂಲದ ಯುವಕ ಮೃತ್ಯು

Pinterest LinkedIn Tumblr

ಬೆಳ್ತಂಗಡಿ: ದುಬೈಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೆಳ್ತಂಗಡಿಯ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಕುವೆಟ್ಟು ನಿವಾಸಿ ಕ್ಲೇವಿನ್ ಅವಿನ್ ರೊಡ್ರಿಗಸ್ ಮೃತಪಟ್ಟ ದುರ್ದೈವಿ.

ಕುವೆಟ್ಟು ಸರ್ಕಾರಿ ಶಾಲೆಯ ಬಳಿಯ ಸಿರಿಲ್ ರೊಡ್ರಿಗಸ್ ಮತ್ತು ಮೇರಿ ಮೊಂತೆರೋ ದಂಪತಿಯ ಪುತ್ರನಾಗಿರುವ ಕ್ಲೇವಿನ್ ಅವಿನ್ ರೊಡ್ರಿಗಸ್ ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ನಿಟ್ಟೆ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಮುಗಿಸಿ ದುಬೈಗೆ ಹೋಗಿದ್ದರು.

3 ದಿನಗಳ ಹಿಂದೆಯಷ್ಟೆ ಇವರಿಗೆ ಉದ್ಯೋಗ ದೊರಕಿದ್ದು, ಕೆಲಸದಿಂದ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಬರುವಾಗ ಅಪಘಾತವಾಗಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Comments are closed.