ಕರಾವಳಿ

ಹಿಂದೂ ಯುವ ಸೇನೆಯ ಮುಖಂಡ ಜಯಂತ್ ಎಸ್‌.ಕುಂಪಲ ಆತ್ಮಹತ್ಯೆ

Pinterest LinkedIn Tumblr

ಮಂಗಳೂರು: ಹಿಂದೂ ಯುವ ಸೇನೆಯಲ್ಲಿ ಸಕ್ರಿಯರಾಗಿದ್ದ ಜಯಂತ್ ಎಸ್‌.ಕುಂಪಲ (50) ಅವರು ಕುಂಪಲದ ಕೃಷ್ಣನಗರದಲ್ಲಿನ ಬಾಡಿಗೆ ಮನೆಯಲ್ಲಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಯಂತ್‌ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜಯಂತ್‌ ಅವರು ತೊಕ್ಕೊಟ್ಟಿನಲ್ಲಿ ಆಟೊರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದರು. ಕುಂಪಲದ ಹನುಮಾನ್‌ ನಗರದಲ್ಲಿ ಹೊಸ ಮನೆಯನ್ನು ಕಟ್ಟಿಸುತ್ತಿದ್ದ ಅವರು ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಶುಕ್ರವಾರ ಪಾಲ್ಗೊಂಡಿದ್ದರು. ಕಾರ್ಯಕ್ರಮದಿಂದ ಮರಳುವಾಗ ಅವರ ಮೊಬೈಲ್‌ ಫೋನನ್ನು ಕಳೆದುಕೊಂಡಿದ್ದರು. ಹೊಸ ಫೋನ್‌ ಖರೀದಿಸಲು 5 ಸಾವಿರ ಸಾಲ ನೀಡುವಂತೆ ಗೆಳೆಯರನ್ನು ಕೋರಿದ್ದರು. ಈ ವಿಚಾರವಾಗಿ ಬೇಸರಗೊಂಡಿದ್ದರು. ಪತ್ನಿ ಮನೆಗೆ ಮರಳಿದಾಗ ಜಯಂತ್‌ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ ಎನ್ನಲಾಗಿದೆ.

Comments are closed.