ಕರಾವಳಿ

ಶಾಲೆಗೆ ಹೋಗಲು ಮನಸ್ಸಿಲ್ಲದ ಹಿನ್ನೆಲೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ 9 ತರಗತಿ ವಿದ್ಯಾರ್ಥಿ

Pinterest LinkedIn Tumblr

ಕುಂದಾಪುರ: ಶಾಲೆಗೆ ಹೋಗಲು ಮನಸ್ಸಿಲ್ಲದ 9 ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ  ನಿಲ್ಸಕಲ್ ಎಂಬಲ್ಲಿ‌ ನಡೆದಿದೆ.

ಹಾಲಾಡಿ ಪ್ರೌಡಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ  ಮಾಡುತ್ತಿರುವ ಗಣೇಶ (14) ಆತ್ಮಹತ್ಯೆಗೆ ಶರಣಾದ ಬಾಲಕ.

ಈತನು ಶಾಲೆಗೆ ಹೋಗಲು ಮನಸ್ಸು ಇಲ್ಲದೆ ಇರುವ ಕಾರಣಕ್ಕೆ ಬೇಸರಗೊಂಡು ನಿಲ್ಸಕಲ್ ಇರಿಗೆ ಎಂಬಲ್ಲಿ  ಮನೆಯ ಪಕ್ಕದಲ್ಲಿರುವ ಸೌದೆ ತುಂಬುವ ಮಾಡಿನ ಒಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.