ಕರಾವಳಿ

ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಆರೋಗ್ಯ ವಿಚಾರಿಸಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಕಳೆದೆರಡು ತಿಂಗಳ ಹಿಂದೆ ಅವಘಡದಲ್ಲಿ ಕಾಲಿಗೆ ಏಟು ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರ ಆರೋಗ್ಯವನ್ನು ಕುಂದಾಪುರ ಕ್ಷೇತ್ರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ವಿಚಾರಿಸಿದರು.

ಗೋಪಾಲ ಪೂಜಾರಿಯವರ ನಿವಾಸಕ್ಕೆ ಆಗಮಿಸಿದ ಶ್ರೀನಿವಾಸ ಶೆಟ್ಟಿಯವರು ಕುಶಲೋಪರಿ ವಿಚಾರಿಸಿದರು. ಮಾತ್ರವಲ್ಲದೆ ಸುಮಾರು ಒಂದು ಗಂಟೆ ಕಾಲ ಆಗುಹೋಗುಗಳ ಬಗ್ಗೆ ರಾಜಕೀಯ ರಹಿತವಾಗಿ, ಆತ್ಮೀಯತೆಯಿಂದ ಮಾತನಾಡಿದರು ಎಂದು ತಿಳಿದುಬಂದಿದೆ.

Comments are closed.