ಕರ್ನಾಟಕ

ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್‌ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ, ಹಿರಿಯ ನಟ ಸತ್ಯ ನಾರಾಯಣ್ ಜೂ.3ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 70 ವರ್ಷದ ಸತ್ಯ ನಾರಾಯಣ್ ಯೋಗರಾಜ್ ಭಟ್ ಅವರ ಪತ್ನಿಯ ತಂದೆ. ನಟ ನಾರಾಯಣ್ ಮಗಳು ಮತ್ತು ಅಳಿಯ ಯೋಗರಾಜ್ ಭಟ್ಟರ ಬೆಂಗಳೂರಿನ ಮನೆಯಲ್ಲೇ ವಾಸವಿದ್ದರು ಎನ್ನಲಾಗಿದೆ. ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸತ್ಯ ನಾರಾಯಣ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಪವನ್ ಕುಮಾರ್ ನಿರ್ದೇಶನದ ಲೈಫು ಇಷ್ಟೇನೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯ ಅವರು ಇಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಲೈಫ್ ಇಷ್ಟೇನೆ ಪಾತ್ರದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ಗಣೇಶ್, ದುನಿಯಾ ವಿಜಯ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಹೆಸರಾಂತ ನಟರ ಜೊತೆ ಪಾತ್ರ ಮಾಡಿದ್ದರು.

ಯೋಗರಾಜ್ ಭಟ್ ನಿರ್ದೇಶನದ ಅನೇಕ ಸಿನಿಮಾಗಳಲ್ಲೂ ಸತ್ಯ ನಾರಾಯಣ್ ಕಾಣಿಸಿಕೊಂಡಿದ್ದರು. ಜಯಮ್ಮನ ಮಗ, ಕೆಂಡ ಸಂಪಿಗೆ, ಕಡ್ಡಿಪುಡಿ, ದನಕಾಯೋನು ಹಾಗೂ ಆಕ್ಟ್ 1978, ಪ್ರೀತಿ ಗೀತಿ ಇತ್ಯಾದಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದರು.

Comments are closed.