ಕರ್ನಾಟಕ

ರಾಮರಾಜ್ಯ ಸ್ಥಾಪನೆಯ ಸಂಕಲ್ಪದೊಂದಿಗೆ ರಾಮ ನವಮಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ: ಸಿದ್ದರಾಮಯ್ಯ ಟ್ವೀಟ್

Pinterest LinkedIn Tumblr

ಬೆಂಗಳೂರು: ಇಂದು (ಏ.10 ಭಾನುವಾರ) ರಾಮನವಮಿ ಸಂಭ್ರಮ. ಗಣ್ಯಾತೀಗಣ್ಯರು ಜನತೆಗೆ ಶುಭ‌ಕೋರುತ್ತಿದ್ದು‌ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು‌ ಕೂಡ‌ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

ರಾಮನವಮಿಗೆ ಶುಭಕೋರಿ ಟ್ವೀಟ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು ‘ಪ್ರಜಾ ಸಮೂಹವನ್ನು ತನ್ನ ಕುಟುಂಬವೆಂಬಂತೆ ಪ್ರೀತಿಸಿದ, ಸತ್ಯಸಂಧತೆ ಮತ್ತು ವಚನಪಾಲನೆಗಾಗಿ‌‌ ಸರ್ವಸ್ವವನ್ನು ತ್ಯಾಗ ಮಾಡಿ‌ ನುಡಿದಂತೆ ನಡೆದ ಶ್ರೀರಾಮನ ಮನುಷ್ಯ ಪ್ರೇಮದ ಉದಾತ್ತ ಗುಣಗಳು ನಮ್ಮೆಲ್ಲರ ಆದರ್ಶವಾಗಲಿ.

ಈ ದಿನ ಸ್ನೇಹ, ಪ್ರೀತಿ, ಸೌಹಾರ್ದತೆಯ ರಾಮರಾಜ್ಯ ಸ್ಥಾಪನೆಯ ಸಂಕಲ್ಪ ಮಾಡುವ ಮೂಲಕ ರಾಮ ನವಮಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ’ ಎಂದಿದ್ದಾರೆ.

Comments are closed.