ಕರಾವಳಿ

ಉದ್ಯಮಿ ಆರ್.ಎನ್ ನಾಯಕ್ ಹತ್ಯೆ; ಭೂಗತ ಪಾತಕಿ ಬನ್ನಂಜೆ ರಾಜ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ

Pinterest LinkedIn Tumblr

ಬೆಳಗಾವಿ: ಹಫ್ತಾಕ್ಕೆ ಬೇಡಿಕೆಯಿಟ್ಟು ಕೊಡದ ಕಾರಣಕ್ಕಾಗಿ ಅಂಕೋಲಾದ ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.

ಬೆಳಗಾವಿಯ ಕೋಕಾ ನ್ಯಾಯಾಲಯದಿಂದ ಇಂದು (ಏಪ್ರಿಲ್ 4, ಸೋಮವಾರ) ತೀರ್ಪು ಪ್ರಕಟಿಸಲಾಗಿದೆ. 3 ಕೋಟಿ ಹಫ್ತಾ ನೀಡದಿದ್ದಕ್ಕೆ ಆರ್.ಎನ್. ನಾಯಕ್ ಹತ್ಯೆ ಮಾಡಲಾಗಿತ್ತು.ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ 2013ರ ಡಿಸೆಂಬರ್ 21 ರಂದು ಉದ್ಯಮಿ ನಾಯಕ್ ಕೊಲೆಯಾಗಿತ್ತು. ಸುಪಾರಿ ನೀಡಿ ಕೊಲೆ ಮಾಡಿಸಿದ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆ, ಬನ್ನಂಜೆ ರಾಜಾ ಸೇರಿ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

ಪ್ರಕರಣದಲ್ಲಿ ಕ್ರಮವಾಗಿ 2,3 ಮತ್ತು ನಾಲ್ಕನೆ ಆರೋಪಿಗಳಾಗಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಬೆಂಗಳೂರಿನ ಅಭಿ ಬಂಡಗಾರ್, ಉಡುಪಿಯ ಗಣೇಶ್ ಭಜಂತ್ರಿ ಆಗಿದ್ದು 9ನೇ ಆರೋಪಿಯಾಗಿರುವ ಉಡುಪಿಯ ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಮಾಡಲಾಗಿದೆ.

Comments are closed.