ಕುಂದಾಪುರ: ತಾಲೂಕಿನ ಅಸೋಡು ಗ್ರಾಮದ ಶ್ರೀ ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಮರಿಗೆ ಮತ್ತು ಹಿಂದುಯೇತರರಿಗೆ ಅಂಗಡಿ ಹಾಕಲು ಅವಕಾಶ ನೀಡಬಾರದಾಗಿ ಅಸೋಡು ಗ್ರಾಮಸ್ಥರು ಹಾಗೂ ಹಿಂದೂ ಸಂಘಟನೆಯ ಪ್ರಮುಖರು ಸೇರಿ ಅಸೋಡು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಪತ್ರ ನೀಡಿದರು.

ಹಿಂದೂ ದೈವ ದೇವರಿಗೆ ಅಪಮಾನ ಮಾಡುವವರಿಗೆ ಹಿಂದೂಗಳ ದೇವಸ್ಥಾನದ ಜಾತ್ರೆಗಳಲ್ಲಿ ಅವಕಾಶ ನೀಡುವುದು ಸರಿಯಲ್ಲ. ಅವರಾಗಿಯೇ ಕ್ರಿಯೆ ಆರಂಭಿಸಿದ್ದು ಅದಕ್ಕೆ ಇದು ನಮ್ಮ ಪ್ರತಿಕ್ರಿಯೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಮುಖ್ಯಸ್ಥರಾದ ಅಜಿತ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಹಿಂದೂ ಸಂಘಟನೆ ಪ್ರಮುಖರಾದ ಪ್ರದೀಪ್ ಮಾರ್ಕೋಡು, ಮಾರುತಿ ಕೋಟೇಶ್ವರ, ಅಶೋಕ್ ಶೇರಿಗಾರ್ ಅಸೋಡು, ಶಶಿ ಕಾಳಾವರ, ಹರ್ಷವರ್ಧನ್ ಮೊದಲಾದವರು ಉಪಸ್ಥಿತರಿದ್ದರು.
Comments are closed.