ಶಿವಮೊಗ್ಗ: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಸದಸ್ಯ, ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಮನೆಗೆ ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಕುಟುಂಬಕ್ಕೆ ಬಿಜೆಪಿ ಯುವ ಮೋರ್ಚಾದಿಂದ 5 ಲಕ್ಷ ರೂ ಹಣದ ಆರ್ಥಿಕ ನೆರವನ್ನು ಕೂಡ ನೀಡಿದರು. ಈ ವೇಳೆ ಮಾತನಾಡಿದ ಸಂಸದರು, ಹಿಂದೂ ಹರ್ಷನ ಹತ್ಯೆ ಕೊಲೆ ಅಲ್ಲ. ಅದು ಭಯೋತ್ಪಾದಕ ಕೃತ್ಯ ಅಂತ ಪ್ರಕರಣ ದಾಖಲಾಗಬೇಕು. ಹರ್ಷ ಹಿಂದೂತ್ವ ಪರವಾಗಿ ಕೆಲಸ ಮಾಡುತ್ತಿದ್ದ ಎಂದು ಮಾಡಿರುವ ಕೃತ್ಯ ಇದು ಎಂದರು.
ಹರ್ಷ ಹಿಂದುತ್ವಕ್ಕಾಗಿ ಬದುಕಿದ ಹುಡುಗ. ಅತ್ಯಂತ ಅಮಾನುಷ ಬರ್ಬರವಾಗಿ ಕೊಲ್ಲಲಾಗಿದೆ. ದೇಶಕ್ಕಾಗಿ ಯೋಧ ಹುತ್ಮಾತ್ಮರಾಗುತ್ತಾರೋ ಹಾಗೇ ನನ್ನ ಮಗ ಹುತಾತ್ಮ ಯಾಗಿದ್ದಾರೆ ಅಂತಾ ಹರ್ಷ ತಾಯಿ ಹೇಳಿದರು. ಪ್ರತಿ ಮನೆಯಲ್ಲಿಯೂ ಹರ್ಷ ನಂತ ಹಿಂದೂ ಹುಟ್ಟಬೇಕು ಎಂದು ತಿಳಿಸಿದರು.
ಹತ್ಯೆ ಸಂಬಂಧ ಬಂಧಿಸಿರುವ ನಾಲ್ಕು ಜನ ಕೂಡ ಸುಫಾರಿ ಕಿಲ್ಲರ್ಗಳು. ಈ ರೀತಿ ಹಿಂದೂ ಕಾರ್ಯಕರ್ತರ ಹತ್ಯೆ ನಿಲ್ಲಬೇಕು ಎಂದರೆ ಇಂಟಲೇಜಿನ್ಸ್ ಟೀಂನಲ್ಲಿ ಭಯೋತ್ಪಾದಕ ನಿಗ್ರಹ ದಳವನ್ನು ಜಾರಿಗೆ ತರಬೇಕು. ಈ ಸಂಬಂಧ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ.
ಪಿಎಫ್ ಐ ಬ್ಯಾನ್ ಗೆ ಕೇಂದ್ರಕ್ಕೆ ಕೊಟ್ಟಿದ್ದೇವೆ. ಆದರೆ, ಈ ಸಂಬಂಧ ಸರಿಯಾದ ದಾಖಲೆಗಳನ್ನು ನೀಡಿರಲಿಲ್ಲ. ಪಿಎಫ್ಐ ಬ್ಯಾನ್ ಮಾಡಲು ಸೂಕ್ತ ದಾಖಲೆ ನೀಡಬೇಕು. ಈ ಬಾರಿ ಸೂಕ್ತ ದಾಖಲೆ ನೀಡಿ ಬ್ಯಾನ್ ಮಾಡಬೇಕು. ರಾಜ್ಯ ಸರ್ಕಾರಕ್ಕೂ ಬ್ಯಾನ್ ಮಾಡುವ ಅವಕಾಶ ಇದೆ. ಈ ಬಗ್ಗೆ ಸರ್ಕಾರ ಕೂಡ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಈ ವೇಳೆ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಸಂದೀಪ್ ಕುಮಾರ್ ಹಾಗೂ ಯುವಮೋರ್ಚಾದ ಕಾರ್ಯಕರ್ತರು ಕೂಡ ಸಂಸದರೊಂದಿಗೆ ಹರ್ಷನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
Comments are closed.