ಕರಾವಳಿ

ಶಿವಮೊಗ್ಗದ ಯುವಕನ ಹತ್ಯೆ ಅನಾಗರಿಕ ಸಂಸ್ಕೃತಿಯನ್ನು ತೋರಿಸುತ್ತದೆ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಶಿವಮೊಗ್ಗದಲ್ಲಿ ನಡೆದ ಯುವಕನ ಹತ್ಯೆ ಅನಾಗರಿಕ ಸಂಸ್ಕೃತಿಯನ್ನು ತೋರಿಸುತ್ತದೆ. ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು‌ ಪ್ರಕಾರ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

ಕುಂದಾಪುರದ ತಲ್ಲೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಮೊಗ್ಗದವರೆ ಗೃಹ ಸಚಿವರಾಗಿದ್ದು ಸರಿಯಾದ ಕ್ರಮ ಕೈಗೊಳ್ಳುತ್ತಾರೆ. ಕರಾವಳಿ ಜಿಲ್ಲೆಗೆ ಯಾವ ಕಾರಣಕ್ಕೂ ಈ ಪ್ರಕ್ಷುಬ್ದತೆ ಹಬ್ಬುವುದಿಲ್ಲ. ಕರಾವಳಿಯವರು ಬುದ್ದಿವಂತರಾಗಿದ್ದು ಏನೂ ಸಮಸ್ಯೆಯಾಗಲ್ಲ. ಕೋಟ್ಯಾಂತರ ಜನರು‌ ಇರುವಾಗ ಗದ್ದಲ ನಡೆದಿದ್ದಕ್ಕೆ ಸರಕಾರದ ವೈಫಲ್ಯ ಎಂದು ಹೇಳಲಾಗುವುದಿಲ್ಲ. ಸರಕಾರ ಇಂತಹ ದುಷ್ಕರ್ಮಿಗಳನ್ನು ಮಟ್ಟಹಾಕಲು ಸಿದ್ದವಾಗಿದೆ ಎಂದರು.

ಹಿಜಾಬ್ ಧರಿಸಲು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶವಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಲಾಗಿದೆ ಎಂದವರು ಹೇಳಿದರು.

Comments are closed.