(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಪಂಚಮಿ ಮೆಲೋಡಿಸ್ ಕಂಚುಗೋಡು ಕುಂದಾಪುರ ಮತ್ತು ಜಿ.ಜಿ.ಎಸ್ ಕಟ್ಟೆ, ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಕೋಟೇಶ್ವರ ವಲಯ, ಬೀಜಾಡಿ ವಲಯ ಇವರೊಂದಿಗೆ ಇತ್ತೀಚೆಗೆ ಕೋಟೇಶ್ವರದಲ್ಲಿ ಪುಟ್ಟ ಕಂದಮ್ಮ ನಿರೂಪ್ ಗೆ ಚಿಕಿತ್ಸೆಗೆ ದೇಣಿಗೆ ಸಂಗ್ರಹಕ್ಕಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಒಟ್ಟಾದ 70,250 ರೂಪಾಯಿ ಹಣವನ್ನು ನಿರೂಪ್ ಹೆತ್ತವರಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಜಿಲ್ಲಾ ಸಂಚಾಲಕ ಸುರೇಂದ್ರ ಮಾರ್ಕೊಡು ಮತ್ತು ಬಜರಂಗದಳದ ಕಾರ್ಯಕರ್ತರ ಉಪಸ್ಥಿತಿ ಹಕ್ಕಿ ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ನೀಡಲಾಯಿತು.
ಪಂಚಮಿ ಮೆಲೋಡಿಸ್ ಕಂಚಗೋಡು ಹರೀಶ್ ಮತ್ತು ಗಾಯಕ-ಗಾಯಕಿಯರು ಹಾಗೂ ವಿಶ್ವ ಹಿಂದೂ ಪರಿಷದ್ ನ ಕಾರ್ಯಕರ್ತರು ಮತ್ತು ಇತರರು ಉಪಸ್ಥಿತರಿದ್ದರು.
ಮಗುವಿನ ಚಿಕಿತ್ಸೆಗಾಗಿ ಧನ ಸಹಾಯ ನೀಡಿದ ಎಲ್ಲಾ ದಾನಿಗಳಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕೋಟೇಶ್ವರ ಮತ್ತು ಬೀಜಾಡಿ ವಲಯದವರು ಕೃತಜ್ಞತೆ ಸಲ್ಲಿಸಿದ್ದಾರೆ.
Comments are closed.