ಕರಾವಳಿ

ಹೆಬ್ರಿಯಲ್ಲಿ ಯುವ ವಾಲಿಬಾಲ್ ಆಟಗಾರ ನೇಣಿಗೆ ಶರಣು

Pinterest LinkedIn Tumblr

ಉಡುಪಿ: ಯುವ ವಾಲಿಬಾಲ್ ಆಟಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೆಬ್ರಿ ಕೆಳಪೇಟೆ ಶೇರಿಗಾರ್ ಬೆಟ್ಟು ನಿವಾಸಿ ಪ್ರಶಾಂತ್ ಯಾನೆ ಪಚ್ಚು(30) ನೇಣಿಗೆ ಶರಣಾದ ಯುವಕ.

ಭೂತ ಕೋಲ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಠಾಸೆ ಬಾರಿಸುವುದರಲ್ಲಿ ನಿಪುಣರಾಗಿದ್ದ ಇವರು ಉತ್ತಮ ವಾಲಿಬಾಲ್ ಆಟಗಾರಾಗಿದ್ದರು. ಹೆಬ್ರಿ ಎತಿಪಿ ಹಾಗೂ ಎರ್ಲಪಾಡಿ ವಾಲಿಬಾಲ್ ಟೀಂ ಗಳಲ್ಲಿ ಆಡುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.