ಕರಾವಳಿ

ಗೋಮಾತೆ ರಕ್ಷಣೆಗಾಗಿ ಪ್ರತಿ ಮನೆಯಲ್ಲಿ ಖಡ್ಗವಿಟ್ಟುಕೊಳ್ಳಿ: ಸಾಧ್ವಿ ಬಾಲಿಕಾ ಸರಸ್ವತಿ

Pinterest LinkedIn Tumblr

ಉಡುಪಿ: ಗೋರಕ್ಷಣೆಗಾಗಿ ಪ್ರತಿ ಹಿಂದೂಗಳ ಮನೆಯಲ್ಲಿ ಖಡ್ಗವನ್ನು ಇಟ್ಟು ಗೋಮಾತೆಯನ್ನು ರಕ್ಷಿಸಬೇಕು. ರಾಜ್ಯದಲ್ಲಿ ಮತಾಂತರ, ಲವ್ ಜಿಹಾದ್ ವಿರುದ್ದ ಮತ್ತು ಗೋರಕ್ಷಣೆಗಾಗಿ ಕಠಿಣ ಕಾನೂನು ತರುವಂತೆ ಸರಕಾರವನ್ನು ಸಾಧ್ವಿ ಬಾಲಿಕಾ ಸರಸ್ವತಿ‌ ಒತ್ತಾಯಿಸಿದರು.

ಅವರು ಭಾನುವಾರ ಕಾರ್ಕಳ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷದ್ ಭಜರಂಗದಳ ಉಡುಪಿ ಇದರ ವತಿಯಿಂದ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.

ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ತ್ಯಾಗವಿದೆಯೋ ಅಲ್ಲಿಯವರೆಗೆ ಹಿಂದೂ ಧರ್ಮ ನಶಿಸಿ ಹೋಗದು , ಟಿಪ್ಪು ಸುಲ್ತಾನ್ ಪೂಜಿಸುವ ಮನಸ್ಸುಗಳಿಗೆ ಧಿಕ್ಕರಿಸಿಬೇಕಾಗಿದ್ದು ಅಯೊಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ.

ಗೋಕಳ್ಳತನ ರಾಜ್ಯದಲ್ಲಿ ನಡೆಯುತ್ತಿದ್ದು ಗೋರಕ್ಷಣೆಗಾಗಿ ಮನೆಯಲ್ಲಿ ಖಡ್ಗವನ್ನು ಇಟ್ಟು ಈ ಮೂಲಕ ಗೋವುಗಳನ್ನು ರಕ್ಷಿಸಬೇಕಾಗಿದ್ದು, ಭಾರತೀಯ ಮಕ್ಕಳಿಗೆ ಭಗವದ್ಗೀತೆ ಬೋದಿಸಬೇಕು ಈ ಮೂಲಕ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಪಾಠವನ್ನು ತಿಳಿಸಬೇಬೇಕು ಎಂದರು.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ , ದೇಶದ ಸಂಸ್ಕೃತಿ ಯನ್ನು ರಕ್ಷಿಸುತ್ತಿರುವ ಸಂಘ ಕಾರ್ಯಕರ್ತರ ಅನನ್ಯ ಸೇವೆಯಿಂದ ಎಂದು ನಾವು ತಲೆ ಎತ್ತಿ ಬಾಳುತಿದ್ದೆವೆ. ನಮ್ಮ ಮನೆಯಲ್ಲಿರುವ ಮಕ್ಕಳಿಗೆ ಉತ್ತಮ ಸಂಸ್ಕೃತಿಯ ಶಿಕ್ಷಣ ನೀಡುವುದರೊಂದಿಗೆ, ಹಿಂದೂ ಧರ್ಮದ ಸಂಸ್ಕೃತಿಯನ್ನು ಗೌರವಿಸುವ ಸರಕಾರವನ್ನು ನಾವು ಚುನಾಯಿಸಬೇಕು ಎಂದರು.

ನಮ್ಮ ಹಿಂದೂಗಳ ಶೃದ್ದಾ ಕೇಂದ್ರಗಳ ರಕ್ಷಣೆಗೆ, ಗೋ ಮಾತೆಯ ರಕ್ಷಣೆಗೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಬೇಕಾಗಿದ್ದು ಯಾವುದೇ ಸಮಯದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಬೆಡಿ ಎಂದು ಕಿವಿ‌ಮಾತು ಹೇಳಿದರು.

ಗೌರಿ ಗದ್ದೆ ದತ್ತಾಶ್ರಮದ ವಿನಯ ಗುರೂಜಿ ಮಾತನಾಡಿ ಹಿಂದೂ ಧರ್ಮ ಉಳಿಯಲು , ಧರ್ಮ ಪ್ರಜ್ಞೆ ನೀಡುವ ಪ್ರವೃತ್ತಿ ಬಾಲ್ಯದಲ್ಲೇ ಅಗಬೇಕು. ನಮ್ಮೂರೆ ನಮಗೆ ತೀರ್ಥ ಕ್ಷೇತ್ರ ವಾಗಬೇಕು ಆಗ ಮಾತ್ರ ಧರ್ಮದ ಉಳಿವು ಸಾಧ್ಯ ಎಂದರು.

ಗೋಮಾತೆ ವಿರುದ್ಧ ಹೋರಾಡುವ ಭಜರಂಗದಳದ ಭಕ್ತರ ಮೇಲಿನ ಕೇಸನ್ನು ರದ್ದುಗೊಳಿಸಲು ಸಹಿ ಸಂಗ್ರಹ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದು, ದತ್ತ ನಿಧಿಗೆ ರೂ. 50000 ಸಹಾಯವನ್ನು ಈ ವೇಳೆ ಅವರು ಪ್ರಕಟಿಸಿದರು.

ಆನೆಗುಂದಿ ಮಠದ ಕಾಳಹಸ್ತೆಂದ್ರ ಸ್ವಾಮೀಜಿ ಮಾತನಾಡಿ ದೇಶದಲ್ಲಿ ಸಂತರು ಶಾಂತಿಯನ್ನು ಹಂಚಿದವರು. ಆದರೆ ದೇಶದೊಳಗಿನ ದುಷ್ಟ ಶಕ್ತಿಗಳೇ ಹೆಚ್ಚಾಗಿದ್ದು, ದೇಶದ ಸಮಸ್ಯೆಗಳಾದ ಮತಾಂತರ, ಭಯೋತ್ಪಾದನೆ ಹಿಮ್ಮೆಟ್ಟಿಸಬೆಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಕಾರ್ಕಳದ ಮುಖ್ಯ ರಸ್ತೆಗಳಲ್ಲಿ ಕೇಸರಿ ಧ್ವಜಗಳೊಂದಿಗೆ ಕಾರ್ಕಳ ಸ್ವರಾಜ್ಯ ಮೈದಾನದಿಂದ ಗಾಂಧಿ ಮೈದಾನದ ವರೆಗೆ ಅಭೂತಪೂರ್ವ ಶೋಭಾ ಯಾತ್ರೆ ಜರುಗಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವ ಹಿಂದೂ ಪರಿಷತ್ತಿನ ಎಂ.ಬಿ ಪುರಾಣಿಕ್, ಬೋಳ ಶ್ರಿನಿವಾಸ ಕಾಮತ್, ಕಡ್ತಲ ವಿಶ್ವ ನಾಥ ಪೂಜಾರಿ, ಸುವೃತ್ ಕುಮಾರ್ ,ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಹಿರ್ಗಾನದ ಮೊಕ್ತೇಸರ ಅಶೋಕ್ ನಾಯಕ್ ಹಿರ್ಗಾನ, ಮಹೇಶ್ ಶೆಟ್ಟಿ ಕುಡುಪುಲಾಜೆ, ಶರತ್ ಹೆಗ್ಡೆ ಬೆಲ್ಮಣ್ಣು, ಸುಂದರ್ ಬಿ ಹೊಸ್ಮಾರು, ಸುನೀಲ್ ಕೆ.ಆರ್, ಭುಜಂಗ ಕುಲಾಲ್, ಸುರೇಖ ರಾಜ್, ವಿಷ್ಣುಮೂರ್ತಿ ಆಚಾರ್ಯ, ಸುರೇಂದ್ರ ಕೋಟೇಶ್ವರ ಮುಂತಾದವರು ಉಪಸ್ಥಿತರಿದ್ದರು.

Comments are closed.