ಕರ್ನಾಟಕ

ರಾಜ್ಯದಲ್ಲಿ ಶಾಲೆ-ಕಾಲೇಜು ಮುಚ್ಚುವ ನಿರ್ಧಾರ ಸದ್ಯಕ್ಕಿಲ್ಲ: ಸಚಿವ ಬಿ.ಸಿ ನಾಗೇಶ್

Pinterest LinkedIn Tumblr

ಬೆಂಗಳೂರು: ಕೊರೋನಾ ರೂಪಾಂತರಿ ವೈರಸ್ ಕಾರಣಕ್ಕೆ ಈವರೆಗೂ ರಾಜ್ಯದಲ್ಲಿ ಶಾಲಾ -ಕಾಲೇಜು ಮುಚ್ಚುವ ನಿರ್ಧಾರ ಮಾಡಿಲ್ಲ ಪೋಷಕರು ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ.

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವ ಬಗ್ಗೆ ಖಾಸಗಿ ಟಿವಿವಾಹಿನಿ ಜೊತೆ ಮಾತನಾಡಿದ ಸಚಿವರು, ಸದ್ಯಕ್ಕೆ ಶಾಲಾ -ಕಾಲೇಜು ಬಂದ್ ಮಾಡುವ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದರು.

ಪೋಷಕರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ. ಶಾಲೆ ಮುಚ್ಚುವ ನಿರ್ಧಾರ ಶಿಕ್ಷಣ ಇಲಾಖೆಯ ಮುಂದಿಲ್ಲ. ಕೊರೊನಾ ಹೆಚ್ಚಾದರೆ ಸರ್ಕಾರದ ಸಲಹೆ ಪಡೆದು ನಿರ್ಧಾರ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಸದ್ಯ ಶಾಲೆ-ಕಾಲೇಜುಗಳಲ್ಲಿ ಸೋಂಕು ಗಂಭೀರವಾಗಿ ಹರಡಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದರು.

Comments are closed.