ಬೆಂಗಳೂರು: ಯುವರತ್ನ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಯೊಬ್ಬರು ಅಯ್ಯಪ್ಪನ ದರ್ಶನ ಮಾಡಿಸಿದ್ದಾರೆ. ಪ್ರಸ್ತುತ ಶಬರಿಮಲೆ ದರ್ಶನ ಆರಂಭವಾಗಿದ್ದು, ರಾಜ್ಯದಿಂದ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪ್ಪುವಿನ ಫೋಟೊವನ್ನು ಕೂಡ ತನ್ನೊಂದಿಗೆ ಕೊಂಡು ಹೋಗುವ ಮೂಲಕ ಅಭಿಮಾನಿಯೊಬ್ಬರು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಅಪ್ಪು ಅಗಲಿ ತಿಂಗಳಾಗುತ್ತಿದ್ದರೂ ಅವರ ನೆನಪನ್ನು ಅಭಿಮಾನಿಗಳು ಬಿಟ್ಟಿಲ್ಲ. ಅದಕ್ಕೆ ತಾಜಾ ಉದಾಹರಣೆಯಾಗಿ ಇಲ್ಲೊಬ್ಬ ಅಭಿಮಾನಿ ಶಬರಿಮಲೆ ಅಯ್ಯಪ್ಪನ 18 ಮೆಟ್ಟಿಲುಗಳನ್ನು ಅಪ್ಪು ಭಾವಚಿತ್ರದೊಂದಿಗೆ ಹತ್ತಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿದ್ದಾನೆ.
ಪುನೀತ್ ರಾಜ್‍ಕುಮಾರ್ ಅನೇಕ ವರ್ಷಗಳಿಂದ ಶಬರಿಮಲೆಗೆ ಹೋಗುವ ಪರಿಪಾಠ ಹೊಂದಿದ್ದು ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ಬಾಲ್ಯದಿಂದಲೂ ತಂದೆ ಡಾ.ರಾಜ್‍ಕುಮಾರ್ ಜೊತೆ ತೆರಳಿ ದರ್ಶನ ಪಡೆಯುತ್ತಿದ್ದರು. ಅವರು ಅಗಲಿದ ಬಳಿಕ ಸಹೋದರ ಶಿವರಾಜ್ ಕುಮಾರ್ ಅವರ ಜೊತೆ ವೃತಾಚರಣೆಯೊಂದಿಗೆ ಶಬರಿಮಲೆಗೆ ಹೋಗುತ್ತಿದ್ದರು.
ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ, ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರೂ ಆಗಿರುವ ವ್ಯಕ್ತಿಯೊಬ್ಬರು, ಸನ್ನಿಧಾನದ ಮೆಟ್ಟಿಲು ಏರುವ ಸಂದರ್ಭದಲ್ಲಿ ಅಪ್ಪು ಫೋಟೊ ಹಿಡಿದುಕೊಂಡಿರುವ ವಿಡಿಯೊ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಮೊದಲಾದವರು ಟ್ವಿಟರ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Comments are closed.