ಕರಾವಳಿ

ಸುರತ್ಕಲ್’ನಲ್ಲಿ ಮತ್ತೆ ಮುಂದುವರಿದ ನೈತಿಕ ಪೊಲೀಸ್ ಗಿರಿ; ಆರು ಮಂದಿ ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು: ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಅನ್ಯ ಕೋಮಿನ ಯುವಕ ಯುವತಿಯನ್ನು ತಡೆದು ಅವರ ಮೇಲೆ ಹಲ್ಲೆ ಮಾಡಿ ನಿಂಧಿಸಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.

ಘಟನೆ ವಿವರ:
ಯುವತಿ ಅಪಾರ್ಟ್ ಮೆಂಟ್ ಖಾಲಿ ಮಾಡುತ್ತಿದ್ದುದರಿಂದ ಲಗೇಜ್ ಶಿಫ್ಟ್ ಮಾಡಿ ಯುವಕ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರನ್ನು 5-6 ಜನರ ಗುಂಪು ಫಾಲೋ ಮಾಡಿದ್ದಾರೆ. ಹಿಂಬಾಲಿಸಿದ ಗುಂಪು, ಯುವಕ -ಯುವತಿಯನ್ನು ವಿಚಾರಿಸಿ, ಅವರ ಮೂಲವನ್ನು ತಿಳಿದಕೊಂಡು, ಅನ್ಯ ಧರ್ಮದ ಯುವಕನನ್ನು ನಿಂದಿಸಿ, ಥಳಿಸಿದ್ದಾರೆ. ಇದಾದ ಬಳಿಕ ಯುವಕ ಹಲ್ಲೆ ಮಾಡಿದವರ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡು ಕ್ಷಿತ್ರ ಕಾರ್ಯಚರಣೆಗೆ ನಡೆಸಿದ ಪೊಲೀಸರು ಆರೋಪಿಗಳಾದ ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್ ಹಾಗೂ ಸುಖೇಶ್ ರನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿದ್ದಾರೆ.

Comments are closed.