ಕರಾವಳಿ

ಕೆರೆಗೆ ತಾವರೆ ಹೂ ಹಾಕಲು ಹೋದ ವಿದ್ಯಾರ್ಥಿನಿ ಮರಳಿ ಸಿಕ್ಕಿದ್ದು ಶವವಾಗಿ

Pinterest LinkedIn Tumblr

ಸುಳ್ಯ: ವಿದ್ಯಾರ್ಥಿನಿಯೋರ್ವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ನ.15ರಂದು ಬೆಳಿಗ್ಗೆ ನಡೆದಿದೆ.

ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿಯ ಪುತ್ರಿ, ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18)ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾರೆ.

ಶ್ರೇಯಾ ಬೆಳಿಗ್ಗೆ ತಮ್ಮ ಮನೆ ಸಮೀಪದ ಕೆರೆಗೆ ತಾವರೆ ಹೂವಿನ ಗಿಡ ಹಾಕಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೆರೆಗೆ ತಾವರೆ ಹೂವಿನ ಗಿಡ ಬಿಡಲು ಹೋಗುವುದಾಗಿ ಹೇಳಿಹೋಗಿದ್ದ ಶ್ರೇಯಾ ಹಿಂತಿರುಗಿ ಬರದಿದ್ದಾಗ ಮನೆಯವರು ಕೆರೆಯ ಕಡೆ ಹೋಗಿ ಹುಡುಕಾಡಿದ್ದಾರೆ. ಈ ವೇಳೆ ಶ್ರೇಯಾ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ತಿಳಿದಿದೆ.

ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.