ಕರಾವಳಿ

ಕೊರೋನಾ ವೇಳೆ ಕೊಲ್ಲೂರು ದೇವಳದಲ್ಲಿ ದಾಖಲೆಯ ಹುಂಡಿ ಹಣ ಸಂಗ್ರಹ- 50 ದಿನದ ಆದಾಯ 1.36 ಕೋಟಿ ರೂ

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 48-50 ದಿನದ ಅವಧಿಯಲ್ಲಿ ಭಕ್ತರಿಂದ ಸಂಗ್ರಹವಾದ ಹುಂಡಿ ಕಾಣಿಕೆ ಹಣದ ಲೆಕ್ಕಾಚಾರ ಬುಧವಾರ ನಡೆದಿದ್ದು, 1.36 ಕೋಟಿ ರೂ. ಹಣ ಲಭಿಸಿದೆ. ಇದು ಕ್ಷೇತ್ರದ ದಾಖಲೆಯ ಮಟ್ಟದ ಹುಂಡಿ ಕಾಣಿಕೆಯಾಗಿದೆ.

ಕಳೆದೆರಡು ವರ್ಷಗಳಿಂದೀಚೆಗೆ ಕೊರೊನಾ ನಿಯಮಾವಳಿಯ ಹಿನ್ನೆಲೆ ಭಕ್ತರ ಪ್ರವೇಶಕ್ಕೆ ದೇಗುಲಗಳಲ್ಲಿ ನಿರ್ಬಂಧ ಇದ್ದುದರಿಂದ ಕೊಲ್ಲೂರಿನ ಆದಾಯ ಬಹಳಷ್ಟು ಕಡಿಮೆಯಾಗಿತ್ತು. ಪ್ರಸ್ತುತ ಕೋವಿಡ್ ನಿಯಮಾವಳಿ ಸಡಿಲಿಕೆಯಿಂದ ಕಳೆದ 2 ತಿಂಗಳಿನಿಂದ ಕೊಲ್ಲೂರು ದೇಗುಲಕ್ಕೆ ಪ್ರತಿದಿನ ಕನಿಷ್ಠ 8 ಸಾವಿರದಷ್ಟು ಭಕ್ತರು ಆಗಮಿಸಿ ವಿವಿಧ ಹರಕೆಯೊಡನೆ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಹಿತ ನಗದು ಸಮರ್ಪಿಸುತ್ತಿದ್ದಾರೆ.

ನ. 10ರಂದು ಹುಂಡಿಯಲ್ಲಿ 585 ಗ್ರಾಂ ಚಿನ್ನ ಹಾಗೂ 6,400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿಯಂದು 92 ಲಕ್ಷ ರೂ. ಸಂಗ್ರಹವಾಗಿತ್ತು. ಚಿನ್ನ 615 ಗ್ರಾಂ ಹಾಗೂ ಬೆಳ್ಳಿ 3,500 ಗ್ರಾಂ ಸಂಗ್ರಹವಾಗಿತ್ತು. 3 ವರುಷಗಳ ಹಿಂದೆ 3 ತಿಂಗಳ ಅವಧಿಯಲ್ಲಿ 1.10 ಕೋಟಿ ರೂ. ಹುಂಡಿ ಹಣ ಸಂಗ್ರಹ ದಾಖಲೆಯಾಗಿತ್ತು. ಈದೀಗ ಕೊರೊನಾ ಸಂದರ್ಭದಲ್ಲಿ ಕೇವಲ 48-50 ದಿನಗಳಲ್ಲಿ 1.36 ಕೋಟಿ ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮಾಹಿತಿ ನೀಡಿದರು.

Comments are closed.