ಕರಾವಳಿ

ನಿಶ್ಚಿತಾರ್ಥವಾಗಬೇಕಾಗಿದ್ದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ: ಆರೋಪಿ ಬಂಧನ

Pinterest LinkedIn Tumblr

ಮಂಗಳೂರು: ನಿಶ್ಚಿತಾರ್ಥವಾಗಬೇಕಾಗಿದ್ದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಯುವತಿ ನೀಡಿದ ದೂರಿನ ಆಧಾರದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

(ಸಾಂದರ್ಭಿಕ ಚಿತ್ರ)

ಬಂಧಿತನನ್ನು ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ (35) ಎಂದು ಗುರುತಿಸಲಾಗಿದೆ.

ಘಟನೆ ವಿವರ..
ಆರೋಪಿ ನಗರದ ಯುವತಿಯೊಬ್ಬಳ ಜೊತೆ ಮದುವೆಗೆ ಮಾತುಕತೆ ನಡೆದಿತ್ತು. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಕೆಲ ದಿನಗಳ ಬಳಿಕ ಮದುವೆಯಾಗಲಿರುವ ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡ ಶ್ರೀನಿವಾಸ್ ಅಶ್ಲೀಲ, ವಿಚಿತ್ರ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಸಂಕೋಚಗೊಂಡ ಯುವತಿ ಈ ವಿಚಾರವನ್ನು ಯುವತಿ ಮನೆಯವರ ಗಮನಕ್ಕೆ ತಂದಿದ್ದು, ಕೂಡಲೇ ಕುಟುಂಬಸ್ಥರು ನಿಶ್ಚಿತಾರ್ಥ ಮುಂದೂಡಿದ್ದರು ಎನ್ನಲಾಗಿದೆ.

ಇದರ ಬಳಿಕವೂ ಶ್ರೀನಿವಾಸ್ ಸಲಿಂಗ ಕಾಮಕ್ಕೆ ಸಂಬಂಧಿಸಿದ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದು, ಈ ವರ್ತನೆಯಿಂದ ಮತ್ತಷ್ಟು ನೊಂದುಕೊಂಡ ಯುವತಿ ನಗರದ ಸೈಬರ್ ಠಾಣೆಗೆ ಆತನ ವಿರುದ್ಧ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದ್ದರು.

ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Comments are closed.