ಕರ್ನಾಟಕ

ಅಪ್ಪು ಸ್ಮರಣಾರ್ಥ ‘ದೊಡ್ಮನೆ’ಯಿಂದ ಅನ್ನದಾನ: ಸಕಲ ಸಿದ್ದತೆ, ವ್ಯಾಪಕ ಪೊಲೀಸ್ ಭದ್ರತೆ

Pinterest LinkedIn Tumblr

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂದು ರಾಜ್ ಕುಟುಂಬದಿಂದ ಗಣ್ಯರಿಗೆ ಮತ್ತು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಇಂದು 11.30ರ ಬಳಿಕ ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಗು ತ್ರಿಪುರವಾಸಿನಿಯಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅಪ್ಪು ಆಹಾರ ಪ್ರಿಯರಾಗಿದ್ದರಿಂದ ಅವರ ಅಭಿಮಾನಿಗಳಿಗೆ ವಿವಿಧ ರೀತಿಯ ಸಸ್ಯಾಹಾರ, ಮಾಂಸಹಾರಿ ಭಕ್ಷಗಳನ್ನು ಸಿದ್ಧವಾಗಿದೆ.

ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ 50 ಸಾವಿರ ಜನ ಸೇರುವ ಸಾಧ್ಯತೆ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನೇಮಿಸಲಾಗಿದೆ.

ರಾಜ್ ಕುಟುಂಬದ ಸೂಚನೆಯಂತೆ ಅಭಿಮಾನಿಗಳಿಗೆ ಅಚ್ಚುಕಟ್ಟಾಗಿ, ದೇಸಿ ಶೈಲಿಯಲ್ಲಿ ಸೌದೆ ಒಲೆಯಲ್ಲಿಯೇ ಅಡುಗೆಯನ್ನು ಮಾಡಲಾಗಿದ್ದು, ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗುತ್ತದೆ. ಒಮ್ಮೆಲೆ 5 ಸಾವಿರ ಮಂದಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಅಡುಗೆಗಾಗಿ ಅರಮನೆ ಮೈದಾನದಲ್ಲಿ 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀಟರ್ ಎಣ್ಣೆ, ಕೆಜಿಗಟ್ಟಲೆ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಪುದೀನಾ, ಕೊತ್ತಂಬರಿ ಸೊಪ್ಪು ಕಟ್ಟು, ರಾಶಿ ರಾಶಿ ದಿನಸಿಗಳನ್ನು ರಾಜ್ ಕುಟುಂಬ ಅರಮನೆ ಮೈದಾನಕ್ಕೆ ಪೂರೈಸಿದೆ.

Comments are closed.