ಕರಾವಳಿ

ಕರಾವಳಿಯಲ್ಲಿ ಸಂಭ್ರಮದ ದೀಪಾವಳಿಗೆ ವರುಣನ ಅಡ್ಡಿ: ವ್ಯಾಪಾರ ಫುಲ್ ಡಲ್- ಪಟಾಕಿ ಮಾರಾಟಗಾರರು‌ ಕಂಗಾಲು..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ದೀಪಾವಳಿ ಸರಳ ಆಚರಣೆಗೆ ಒತ್ತು ನೀಡಿದ್ದು ಈ ಬಾರಿ ಕೊರೋನಾ ಕೊಂಚ ಕಡಿಮೆಯಾದ ಹಿನ್ನೆಲೆ ದೀಪಾವಳಿ ಆಚರಣೆಗೆ ನಿಯಮಾವಳಿ ರೂಪಿಸಿ ಸರಕಾರ ಆದೇಶಿಸಿತ್ತು. ಹಲವು ಸಮಯಗಳಿಂದ ಹಬ್ಬ ಮೊದಲಾದ ಆಚರಣೆಗಳಿಲ್ಲದೆ ಜನರು ಬೇಸತ್ತಿದ್ದು ಈ ಬಾರಿ ಸಂಭ್ರಮದ ದೀಪಾವಳಿ ಆಚರಣೆಗೆ ಎಲ್ಲವೂ ತಯಾರಿ ನಡೆದಿತ್ತು. ಆದರೆ ಮಳೆಯ ಕಾರಣದಿಂದ ಕರಾವಳಿಯಲ್ಲಿ ದೀಪಾವಳಿ ಆಚರಣೆಗೆ ಕೊಂಚ ಅಡ್ಡಿಯಾಗಿದೆ.

ಸಂಜೆ ಬಳಿಕ‌ ಮಳೆ…
ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು ಸಂಜೆ 3 ಗಂಟೆ ನಂತರ ಗುಡುಗು‌ ಮಿಂಚು‌ಸಹಿತ ಮಳೆಯಾಗುತ್ತಿದೆ. ಗುರುವಾರವೂ ಕೂಡ ಸಂಜೆ ಬಳಿಕ ಮಳೆಯಾಗುತ್ತಿದೆ.

ವ್ಯಾಪಾರ ಬಾರೀ ಡಲ್…!
ಈ ದೀಪಾವಳಿಯಲ್ಲಿ ಪಟಾಕಿ ಮಾರಾಟದ ಬಗ್ಗೆ ವ್ಯಾಪಾರಸ್ಥರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮಳೆ ಸಮಸ್ಯೆಯಿಂದ ಪಟಾಕಿ ವ್ಯಾಪಾರದಲ್ಲಿ ಬಾರೀ ಪ್ರಮಾಣದ ಇಳಿಕೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ವ್ವಹಾರ ನಡೆಯದೇ ಇರುವುದರಿಂದ ಪಟಾಕಿ ಮಾರಾಟಗಾರರು ಕಂಗಾಲಾಗಿದ್ದಾರೆ. ಮಳೆ ಹಿನ್ನೆಲೆ ಪಟಾಕಿ ಖರೀದಿಗೆ ಗ್ರಾಹಕರು ಇಚ್ಚೆ ತೋರುತ್ತಿಲ್ಲ.

ಹೂ-ಹಣ್ಣು ಖರೀದಿ ಜೋರು..
ವಾಹನ ಪೂಜೆ, ಅಂಗಡಿ ಪೂಜೆ, ತುಳಸಿ ಪೂಜೆ ಸಹಿತ ವಿವಿಧ ಪೂಜಾ ಕೈಂಕರ್ಯಗಳ ಹಿನ್ನಲೆ ಮಾರುಕಟ್ಟೆಯಲ್ಲಿ ಹೂ-ಹಣ್ಣು ಖರೀದಿ ಜೋರಾಗಿಯೇ ಇದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ವ್ಯವಹಾರ ಕಂಡುಬಂದಿಲ್ಲ.

Comments are closed.