ಕರ್ನಾಟಕ

ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ ಭರ್ಜರಿ ಗೆಲುವು: ಹಾನಗಲ್ ನಲ್ಲಿ ಕಾಂಗ್ರೆಸ್ ಮುನ್ನಡೆ

Pinterest LinkedIn Tumblr

ವಿಜಯಪುರ: ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರಿಗೆ ಭರ್ಜರಿ ಗೆಲುವು ದೊರೆತಿದೆ.

13ನೇ ಸುತ್ತಿನಲ್ಲಿ ರಮೇಶ್ ಭೂಸನೂರ 18 ಸಾವಿರದ 853 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಗೆ 57 ಸಾವಿರದ 464 ಮತಗಳು, ಕಾಂಗ್ರೆಸ್ ಅಭ್ಯರ್ಥಿಗೆ 38 ಸಾವಿರದ 611 ಮತಗಳು ಮತ್ತು ಜೆಡಿಎಸ್ ಗೆ 2 ಸಾವಿರದ 538 ಮತಗಳು ಬಂದಿದ್ದವು.

ಸಿಂದಗಿಯಲ್ಲಿ ರಮೇಶ್ ಭೂಸನೂರ ಅವರ ವಿರುದ್ಧ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಜೆಡಿಎಸ್ ನಿಂದ ಸಿಂದಗಿಯಲ್ಲಿ ನಾಜಿಯಾ ಶಕಿಲಾ ಅಂಗಡಿ ಸ್ಪರ್ಧಿಸಿದ್ದರು. 20ನೇ ಸುತ್ತಿನಲ್ಲಿ ರಮೇಶ್ ಭೂಸನೂರ 28 ಸಾವಿರದ 462 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.

ತಮ್ಮ ನಾಯಕನ ಗೆಲವಿನ ಹಿನ್ನೆಲೆಯಲ್ಲಿ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸಂಭ್ರಮ, ಕೇಕೆ ಜೋರಾಗಿದೆ.

Comments are closed.