ಕರಾವಳಿ

ಯಾರೇನೇ ಹೇಳಲಿ, ಬಿಡಲಿ ಸರಕಾರ ಪುನೀತ್ ರಾಜಕುಮಾರ್’ಗೆ‌ ಸೂಕ್ತ ಗೌರವ ನೀಡಲಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕಾಂಗ್ರೆಸ್ ಠೀಕೆ ಬಿಟ್ಟು ಬೇರೇನು ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಅಸ್ಪ್ರಶ್ಯತೆ ಸೇರಿದಂತೆ ಬಡತನಕ್ಕೆ ಕಾಂಗ್ರೆಸ್ ಸರಕಾರದ 60 ವರ್ಷದ ದುರಾಡಳಿತದ ಗಿಫ್ಟ್ ಎನ್ನುವುದನ್ನು ಅವರಿಗೆ ನೆನಪಿಸಬೇಕಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಂದಾಪುರದಲ್ಲಿ‌ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾನಗಲ್, ಸಿಂದಗಿ ಎರಡು ಕ್ಷೇತ್ರ ಗೆಲ್ಲುವ ವಿಶ್ವಾಸವಿತ್ತು.‌ ಸಿಂದಗಿಯಲ್ಲಿ ನಿಶ್ಚಿತವಾಗಿ ಗೆಲ್ಲಲ್ಲಿದ್ದು ಹಾನಗಲ್ ಕ್ಷೇತ್ರದಲ್ಲಿ ಏರಿಳಿತವಿದೆ. ಈ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎನ್ನಲಾಗುವುದಿಲ್ಲ.‌ ಆಯಾಯ ಸಂದರ್ಭಗಳ ಮೇಲೆ ಫಲಿತಾಂಶವಿರುತ್ತದೆ. ಒಟ್ಟಾರೆಯಾಗಿ ಎರಡು ಕ್ಷೇತ್ರದಲ್ಲಿ‌ ಪ್ರಾಬಲ್ಯ ಉಳಿಸಿಕೊಳ್ಳುತ್ತೇವೆ ಎಂದರು.

ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದ ಹಿನ್ನೆಲಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕೆಲವು ಇಂಧನಗಳು, ತೈಲಗಳ ಬೆಲೆ ಏರಿಳಿಕೆಯಾಗುತ್ತಿದೆ. 60 ವರ್ಷದ ಆಡಳಿತ ನಡೆಸಿದವರು ಈಗ ಆಡಳಿತ ನಡೆಸುವರ ವಿರುದ್ಧ ಮಾತನಾಡುವುದು ಅವರ ಬೌದ್ಧಿಕವಾದ ನಂಬಿಕೆ ಕಳೆದುಕೊಂಡಿರುವುದನ್ನು ತೋರಿಸುತ್ತದೆ ಎಂದರು.

ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ‌ನೀಡಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ, ಪುನೀತ್ ರಾಜಕುಮಾರ್ ವ್ಯವಸ್ಥೆ, ಕಲೆ, ಸಿನೆಮಾ ಸಹಿತ ಸಮಾಜದಲ್ಲಿನ ಪ್ರತಿ ಕುಟುಂಬಗಳ ವ್ಯಕ್ತಿಯ ಮನೆ ಮುಟ್ಟಿದ ವ್ಯಕ್ತಿ. ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗ, ಸಾಹಿತ್ಯ ಲೋಕ ಸಹಿತ ರಾಜ್ಯದ ಆರೂವರೆ ಕೋಟಿ ಜನರಿಗಾದ ನಷ್ಟ. ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ. ಹಾಗಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಈಗಾಗಾಲೇ ಹೇಳಿದ್ದು ಪುನೀತ್ ರಾಜಕುಮಾರ್ ಅವರ ಗೌರವಕ್ಕೆ ತಕ್ಕಂತೆ ಸ್ಮಾರಕಗಳು, ಪ್ರಶಸ್ತಿಗಳನ್ನು ಕೊಡಲಾಗುವುದು ಎಂದಿದ್ದಾರೆ. ಈ ಸಂದರ್ಭದಲ್ಲಿ ಅದು ಕೊಡಿ ಇದು ಕೊಡಿ ಎಂದು ಹೇಳುವುದು ಶಿಷ್ಟಾಚಾರವಲ್ಲ. ಯಾರೇನೇ ಹೇಳಿದರು‌ ಸರಕಾರ ಪುನೀತ್ ಅವರಿಗೆ ಗೌರವ ಕೊಡಲಿದೆ ಎಂದರು.

Comments are closed.