(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ನವರಾತ್ರಿಯ ವಿಶೇಷ ದಿನವಾದ ಮಹಾನವಮಿಯಂದು ಅ.14 ಗುರುವಾರ ಕುಂದಾಪುರ ತಾಲೂಕಿನ ಎಲ್ಲೆಡೆ ಆಯುಧ ಪೂಜೆ ಸಡಗರದಿಂದ ಜರುಗಿತು. ಈ ನಿಮಿತ್ತ ವಾಹನ ಪೂಜಾ ಕೈಂಕರ್ಯಗಳ ಸಂಭ್ರಮ ಜೋರಾಗಿತ್ತು. ಕೊಲ್ಲೂರು, ಹಟ್ಟಿಯಂಗಡಿ ಮಾರಲದೇವಿ ದೇವಸ್ಥಾನ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟ ಅಮೃಥೇಶ್ವರಿ ದೇವಸ್ಥಾನ ಸೇರಿದಂತೆ ತಾಲೂಕಿನ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಅಧಿಕ ಸಂಖ್ಯೆವಿದ್ದು ಪೂಜೆ ಸಲ್ಲಿಸಿದರು.







ಸರಕಾರಿ ಆಸ್ಪತ್ರೆಯಲ್ಲಿ ಪೂಜೆ ಸಂಭ್ರಮ
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ನಡೆದ ಆಯುಧ ಪೂಜೆ ವೇಳೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ಪತ್ನಿ ಶಾಲಿಟ್ ಫೆರ್ನಾಂಡೀಸ್ ರೆಬೆಲ್ಲೋ, ಆಸ್ಪತ್ರೆಯ ಶ್ರೀ ನಂದಿಕೇಶ್ವರ ದೇವಸ್ಥಾನದ ಅಧ್ಯಕ್ಷ ಡಾ. ವಿಜಯಶಂಕರ್, ಪಿಜಿಶಿಯನ್ ಡಾ. ನಾಗೇಶ್, ಡಾ. ಉದಯಶಂಕರ್, ಡಾ. ಶಿವಕುಮಾರ್, ಡಾ. ಚಂದ್ರ, ಡಾ. ವಿಜಯಲಕ್ಷ್ಮೀ, ಡಾ. ವೀಣಾ ಪಿ.ಎಸ್. ಇತರ ವೈದ್ಯಾಧಿಕಾರಿ, ಸಿಬ್ಬಂದಿಗಳು, ಹಿರಿಯ ಫಾರ್ಮಸಿ ಅಧಿಕಾರಿ ಶ್ರೀಶ ಭಟ್, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ, ಶಸ್ತ್ರಚಿಕಿತ್ಸಾ ಕೊಠಡಿಯ ಶುಶ್ರೂಷಕಿ ಆಶಾ ಸುವರ್ಣ ಸಿಬ್ಬಂದಿ ಇದ್ದರು.
ಕುಂದಾಪುರ ನಗರ, ಸಂಚಾರಿ ಪೊಲೀಸ್ ಠಾಣೆಯಲ್ಲಿ..
ಕುಂದಾಪುರ ನಗರ ಠಾಣೆ, ಸಂಚಾರಿ ಠಾಣೆ ಹಾಗೂ ಡಿವೈಎಸ್ಪಿ ಕಚೇರಿಯಲ್ಲಿ ಆಯುಧ ಪೂಜೆ ನಡೆಯಿತು. ಡಿವೈಎಸ್ಪಿ ಶ್ರೀಕಾಂತ್ ಕೆ., ವೃತ್ತನಿರೀಕ್ಷಕ ಗೋಪಿಕೃಷ್ಣ, ಹಾಗೂ ಠಾಣಾಧಿಕಾರಿ ಸದಾಶಿವ ಗವರೋಜಿ, ಕ್ರೈಮ್ ಎಸ್ಐ ರಮೇಶ್ ಪವಾರ್, ಸಂಚಾರಿ ಠಾಣೆ ಪಿಎಸ್ಐ ಸುಧಾ ಪ್ರಭು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು. ಇಲಾಖೆಯ ವಾಹನಗಳು, ಬಂದೂಕು ಮೊದಲಾದ ಆಯುಧ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿನ ಉಪಕರಣಗಳಿಗೂ ಪೂಜೆ ಸಲ್ಲಿಸಿದರು.
ಕುಂದಾಪುರ ಪುರಸಭೆ…
ಕುಂದಾಪುರ ಪುರಸಭೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ವಾಹನಗಳಿಗೆ ಹಾಗೂ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ನೆರವೇರಿಸಲಾಯಿತು. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಹಾಗೂ ಸದಸ್ಯರು, ಅಧಿಕಾರಿ ಸಿಬ್ಬಂದಿಗಳು ಇದ್ದರು.
ಬಿಲ್ಲವ ಸಂಘ ಕುಂದಾಪುರ…
ಇನ್ನು ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇವರ ಮಾರ್ಗದರ್ಶನದಲ್ಲಿ ಶ್ರೀನಾರಾಯಣ ಗುರು ಯುವಕಮಂಡಲದ ವತಿಯಿಂದ ಚಂಡಿಕಾ ಹೋಮ, ಅನ್ನಸಂತರ್ಪಣೆ ನಡೆದಿದ್ದು ಈ ವೇಳೆ ಸಮಾಜ ಸೇವಾ ಸಂಘ, ಯುವಕಮಂಡಲ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.