ಕುಂದಾಪುರ: ಸಾರ್ವಜನಿಕ ಸೇವೆಗಾಗಿ ಹಲವು ದಶಕಗಳ ಹಿಂದೆ ಸ್ಥಾಪಿತವಾದ ಸಹಕಾರಿ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿದ್ದು, ಯಾವುದೇ ಕಾರಣಕ್ಕೂ ವಿಲೀನವಾಗುವುದಿಲ್ಲ. ಇದು ಗ್ರಾಮೀಣ ಭಾಗಗಳ ಜನರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ| ಎಂ. ಎನ್.ರಾಜೇಂದ್ರ ಕುಮಾರ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ 106ನೇ ಶಾಖೆ ಶಂಕರನಾರಾಯಣ ಪೇಟೆಯ ಬಸ್ ನಿಲ್ದಾಣ ಪಕ್ಕದಲ್ಲಿರುವ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಸುಮಾರು 30 ಸಾವಿರ ನವೋದಯ ಗುಂಪುಗಳಿದ್ದು, 2022 ರಲ್ಲಿ 60 ಸಾವಿರ ನವೋದಯ ಗುಂಪುಗಳನ್ನು ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅದಕ್ಕಾಗಿ ಗುರಿಯನ್ನು ನೀಡಲಾಗಿದ್ದು, ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಹೆಚ್ಚು ಗುಂಪು ಮಾಡುವ ಪ್ರಾಥಮಿಕ ಸಂಸ್ಥೆಯವರಿಗೆ ಮೊದಲ ಬಹುಮಾನ 30ಲಕ್ಷ, ದ್ವೀತಿಯ 20 ಲಕ್ಷ, ತೃತೀಯ 10 ಲಕ್ಷ ಕೊಡಲಾಗುತ್ತದೆ. ಹೀಗೆ ವಿವಿಧ ಸ್ಥರದ ಬಹುಮಾನ ನೀಡಲಾಗುತ್ತದೆ ಎಂದು ನುಡಿದರು.
ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷೆ ಲತಾ ಡಿ.ಎಸ್., ಶಾಖೆಯ ಭದ್ರತಾ ಕೋಶ ಉದ್ಘಾಟಿಸಿದರು. ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡಾ| ಕೆ. ಸಚ್ಚಿದಾನಂದ ವೈದ್ಯ ಗಣಕೀಕರಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರೂ.1.55 ಕೋಟಿ ವಿವಿಧ ಸಾಲ ವಿತರಣೆ. ರೂ. 8.46 ಕೋಟಿ ಠೇವಣಿ ಸಂಗ್ರಹವಾಗಿದ್ದು, ಪ್ರಥಮ ಠೇವಣಿದಾರರಿಗೆ ಠೇವಣಿ ಪತ್ರ ವಿತರಣೆ. 5 ವಾಹನ ಸಾಲ ವಿತರಣೆ. ಗ್ರಾಹಕರಿಂದ 1293 ಉಳಿತಾಯ ಖಾತೆ ಮಾಡಿಸಿದ್ದು, ಪ್ರಥಮ ಉಳಿತಾಯ ಖಾತೆದಾರರಿಗೆ ಉಳಿತಾಯ ಖಾತೆ ಪುಸ್ತಕ ವಿತರಣೆ ನಡೆಯಿತು. ಲಾಕರ್ ಸೌಲಭ್ಯ ವಿತರಣೆ. ನೂತನ ಸ್ವ ಸಹಾಯ ಸಂಘ ಉದ್ಘಾಟನೆ. ಚೈತನ್ಯ ವಿಮೆ ಹಸ್ತಾಂತರ ನಡೆಯಿತು. ಗ್ರಾಹಕರಿಗೆ ಲಕ್ಕಿಡ್ರಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಶಂಕರನಾರಾಯಣದ ಮುಖಂಡ ಹರಿಪ್ರಸಾದ್ ಆಚಾರ್, ಉಡುಪಿ ಜಿಲ್ಲಾ ಸಹಕಾರಿ ಸಂಘದ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಮಂಗಳೂರು ಹಾಲು ಒಕ್ಕೂಟ ನಿರ್ದೇಶಕ ಡಿ. ಗೋಪಾಲಕೃಷ್ಣ ಕಾಮತ್, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಎಸ್‍ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ರಾಜು ಪೂಜಾರಿ ಬೈಂದೂರು, ಮಹೇಶ್ ಹೆಗ್ಡೆ ಮೊಳಹಳ್ಳಿ, ಹರೀಶ್ಚಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಕಟ್ಟಡ ಮಾಲಕ ಸದಾಶಿವ ನಾಯಕ್, ಶಾಖಾ ಪ್ರಬಂದಕ ಚಂದ್ರಶೇಖರ್ ಶೆಟ್ಟಿ, ವ್ಯವಸಾಯ ಸೇವಾ ಸಹಕಾರಿ ಸಂಘದ ವಿವಿಧ ಶಾಖೆಗಳ ಅಧ್ಯಕ್ಷರಾದ ಬೆಳ್ವೆ ಎಸ್. ಜಯರಾಮ ಶೆಟ್ಟಿ ಸೂರ್ಗೋಳಿ, ಅಮಾಸೆಬೈಲು ಎನ್. ಮಂಜಯ್ಯ ಶೆಟ್ಟಿ ನಡಂಬೂರು, ಉಳ್ಳೂರು-ಮಚ್ಚಟ್ಟು ಬಿ. ರತ್ನಾಕರ ಶೆಟ್ಟಿ, ಸಿದ್ದಾಪುರ ಸಂಘದ ಆಡಳಿತಾ„ಕಾರಿ ಸುನೀಲ್‍ಕುಮಾರ್, ಮಾನಂಜೆ ಶಂಕರನಾರಾಯಣ ಯಡಿಯಾಳ, ಅಂಪಾರು ಗೋಪಾಲಕೃಷ್ಣ ಕಿಣಿ, ವಂಡ್ಸೆ ಮಂಜಯ್ಯ ಶೆಟ್ಟಿ ಸಬ್ಲಾಡಿ, ಕಾವ್ರಾಡಿ ಸದಾನಂದ ಬಳ್ಕೂರು, ಬಸ್ರೂರು ಗೋಪಾಲ ಪೂಜಾರಿ, ಕೋಟೇಶ್ವರ ಶರತ್ ಶೆಟ್ಟಿ, ಮಂದರ್ತಿ ಗಂಗಾಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಿರ್ದೇಶಕ ಮಹೇಶ್ ಹೆಗ್ಡೆ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೊಣೆ ಕಾರ್ಯಕ್ರಮ ನಿರೂಪಿಸಿದರು. ನಿರ್ದೆಶಕ ಎಸ್. ರಾಜು ಪೂಜಾರಿ ಯಡ್ತರೆ ವಂದಿಸಿದರು.
Comments are closed.