ಕರಾವಳಿ

ಮಂಗಳೂರಿನಲ್ಲಿ ಅಪ್ಪನಿಂದಲೇ ಮಗನ ಶೂಟೌಟ್ ಪ್ರಕರಣ: ಉಸಿರು ಚೆಲ್ಲಿದ ಸುಧೀಂದ್ರ

Pinterest LinkedIn Tumblr

ಮಂಗಳೂರು: ನಗರದ ಮಾರ್ಗನ್ಸ್ ಗೇಟ್ ಬಳಿ ಕಳೆದ ಕೆಲವು ದಿನಗಳ ಹಿಂದೆ ತಂದೆಯಿಂದಲೇ ಮಗನ ಮೇಲೆ ಶೂಟೌಟ್ ನಡೆದಿದ್ದು ಜೀವನ್ಮರಣ ಹೋರಾಟ‌ ನಡೆಸುತ್ತಿದ್ದ ಮಗ ಸುಧೀಂದ್ರ ಶುಕ್ರವಾರ ಮೃತಪಟ್ಟಿದ್ದಾನೆ.

ಈ ಘಟನೆ ಮಂಗಳೂರಿನ ಮೊರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಕಾರ್ಗೋ ಸಂಸ್ಥೆಯಲ್ಲಿ ನಡೆದಿದೆ. ಶೂಟೌಟ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ. ಸಿಬ್ಬಂದಿ ಮೇಲಿನ ಕೋಪಕ್ಕೆ ತಂದೆಯೇ ಮಗನ ಮೇಲೆ ಗುಂಡು ಹಾರಿಸಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ.

ವೇತನದ ವಿಚಾರಕ್ಕೆ ರಾಜೇಶ್ ಪ್ರಭು ಬಳಿ ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ಗಲಾಟೆ ಮಾಡಿದ್ದರು. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಾರೆ. ಸುಧೀಂದ್ರ ಪ್ರಭು ಮತ್ತು ಇಬ್ಬರು ಸಿಬ್ಬಂದಿ ಮಧ್ಯೆ ಕಚೇರಿ ಹೊರಗೆ ಹೊಡೆದಾಟ ನಡೆದಿದೆ. ಆಗ ರಾಜೇಶ್ ಕಚೇರಿ ಒಳಗಿಂದ ತನ್ನ ಲೈಸೆನ್ಸ್ ರಿವಾಲ್ವರ್ ಹಿಡಿದು ಹೊರಬಂದರು. ರಿವಾಲ್ವರ್ ಹಿಡಿದು ಸಿಬ್ಬಂದಿ ಮೇಲೆ ಕೈ ಹಾಕಿ ಪರಸ್ಪರ ಹೊಡೆದಾಟ ನಡೆಸಿದರು ಎನ್ನಲಾಗಿದೆ.

ಘಟನೆ ಬಳಿಕ ಸುಧೀಂದ್ರ ಮಿದುಳು ನಿಷ್ಕ್ರಿಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದರು.

Comments are closed.